– 17 ಮಂದಿಗೆ ಗಂಭೀರ ಗಾಯ
ಜೈಪುರ: ಟ್ರಾಕ್ಟರ್ ರೇಸ್ ನೋಡುವ ವೇಳೆ ಶೆಡ್ ಕುಸಿದು 17 ಮಂದಿ ಗಾಯಗೊಂಡಿರುವ ಘಟನೆ ರಾಜಸ್ತಾನದ ಶ್ರೀ ಗಂಗಾನಗರದಲ್ಲಿ ನಡೆದಿದೆ.
ಭಾನುವಾರ ಪಡಂಪುರ್ ಪ್ರದೇಶದಲ್ಲಿನ ಆನಾಜ್ ಮಂಡಿಯಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ಟ್ರಾಕ್ಟರ್ ರೇಸ್ ಅನ್ನು ಆಯೋಜಿಸಲಾಗಿತ್ತು. ರೇಸ್ ನೋಡಲು ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ರೇಸ್ ಕಾಣುತ್ತಿರಲಿಲ್ಲ ಎಂದು ನೂರಾರು ಜನರು ಶೆಡ್ ಮೇಲೆ ಕುಳಿತು ವೀಕ್ಷಿಸುತ್ತಿದ್ದರು. ಅತಿ ಹೆಚ್ಚು ಜನರು ಕುಳಿತಿದ್ದರಿಂದ ಶೆಡ್ ಕುಸಿದಿದೆ. ಶೆಡ್ ಕುಸಿಯುವ ದೃಶ್ಯಗಳು ಸ್ಥಳೀಯ ವ್ಯಕ್ತಿಯೊಬ್ಬರ ಮೊಬೈಲನಲ್ಲಿ ಸೆರೆಯಾಗಿವೆ.
Advertisement
Advertisement
ಶೆಡ್‍ನ ಅಡಿ ಸಿಲುಕಿದ್ದ ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಒಟ್ಟು 17 ಮಂದಿ ಗಾಯಗೊಂಡಿದ್ದು, ಅದರಲ್ಲಿ 7 ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದ10 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.
Advertisement
ಈ ಕಾರ್ಯಕ್ರಮವನ್ನು ಆಯೋಜಿಸಲು ಆಡಳಿತ ಮಂಡಳಿಯ ಆಯೋಜಕರು ಯಾವುದೇ ಅನುಮತಿಯನ್ನು ಪಡೆದುಕೊಂಡಿರಲಿಲ್ಲ. ಟ್ರಾಕ್ಟರ್ ರೇಸ್ ನೋಡುವುದಕ್ಕಾಗಿ ಗ್ರಾಮಸ್ಥರು ಆಗಮಿಸಿದ್ದರು.
Advertisement
#WATCH: Tin shed collapses during a tractor race in Sri Ganganagar's Padampur earlier today. Many feared injured. #Rajasthan pic.twitter.com/rel9ChXhnD
— ANI (@ANI) July 29, 2018
On video, roof collapses after hundreds climb to watch race in Rajasthan https://t.co/qRvyugPCt8 pic.twitter.com/4WioiQPfxj
— NDTV (@ndtv) July 30, 2018