ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್ ಅವರದು ಅನುರೂಪ ದಾಂಪತ್ಯ. ಇದಕ್ಕೆ ಸಾಕ್ಷಿ ಎಂಬಂತೆ ಸುದೀಪ್ ತಮ್ಮ ಪತ್ನಿಗೆ ರೊಮ್ಯಾಂಟಿಕ್ ಆಗಿ ಟ್ವೀಟ್ ಮಾಡಿದ್ದಾರೆ.
ಶನಿವಾರ ಪ್ರಿಯಾ ಅವರ ಹುಟ್ಟುಹಬ್ಬವಿತ್ತು. ಈ ಬಗ್ಗೆ ಟ್ವೀಟ್ ಮಾಡಿ ಸುದೀಪ್ ತಮ್ಮ ಪ್ರೀತಿಯ ಮಡದಿಗೆ ಶುಭ ಹಾರೈಸಿದ್ದಾರೆ. “ಹುಟ್ಟುಹಬ್ಬದ ಶುಭಹಾರೈಕೆಗಳು. ನೀನು ನನ್ನ ಶಕ್ತಿ, ತಾಳ್ಮೆ ಮತ್ತು ಗೌರವದ ಪ್ರತೀಕ. ಎಂದಿಗೂ ನನ್ನ ಪ್ರೀತಿ ಇರುತ್ತದೆ. 2018 ಅದ್ಭುತವಾಗಿರಲಿ” ಎಂದು ಹಾರೈಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರಿಯಾ ಅವರು ಟ್ವೀಟ್ ಮಾಡಿದ್ದು, “ಥಾಂಕ್ಯೂ ಡಾರ್ಲಿಂಗ್ ಹಸ್ಬೆಂಡ್” ಎಂದಿದ್ದಾರೆ. ಸುದೀಪ್ ಬಿಗ್ ಬಾಸ್ ಸೇರಿದಂತೆ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇಷ್ಟೆಲ್ಲಾ ಬ್ಯೂಸಿ ಇದ್ದರೂ ಟ್ವೀಟ್ ಮೂಲಕ ತಮ್ಮ ಪ್ರೀತಿಯ ಸಂದೇಶ ರವಾನಿಸಿರುವುದು ಅಭಿಮಾನಿಗಳಿಗೂ ಖುಷಿಕೊಟ್ಟಿದೆ. ಅಭಿಮಾನಿಗಳು ಸುದೀಪ್ ಮತ್ತು ಪ್ರಿಯಾ ಅವರ ಫೋಟೋಗಳನ್ನು ಹಂಚಿಕೊಂಡು ಶುಭಹಾರೈಸಿದ್ದಾರೆ.
ಪ್ರಿಯಾ ಸುದೀಪ್ ಇತ್ತೀಚಿಗೆ ವಿಮಾನದಲ್ಲಿ ಮೌಂಟ್ ಎವೆರೆಸ್ಟ್ ಪರ್ವತವನ್ನ ಸುತ್ತಿ ಬಂದಿದ್ದಾರೆ. ಪ್ರಿಯಾ ಅವರು ಒಬ್ಬರೇ ಹೋಗದೇ ಜೊತೆಯಲ್ಲಿ ತಮ್ಮ ಮಗಳು ಸ್ವಾನಿಯನ್ನು ಕರೆದುಕೊಂಡು ಹೋಗಿದ್ದು, ಹೊಸ ವರ್ಷದ ನೆನಪಿಗಾಗಿ ಸುಮಧುರ ಕ್ಷಣಗಳನ್ನು ಕಳೆದು ಬಂದಿದ್ದಾರೆ.
ಮೌಂಟ್ ಎವರೆಸ್ಟ್ ನಲ್ಲಿ ಕಳೆದ ಕ್ಷಣಗಳು, ಖುಷಿ, ಎಲ್ಲಾ ಅನುಭವಗಳನ್ನು ಟ್ವೀಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. “ಹದ್ದಿನ ರೀತಿಯಲ್ಲಿ ಪರ್ವತವನ್ನ ಸುತ್ತಿದ ಹಾಗೆ ಅನುಭವ ಆಯ್ತು. ಭವ್ಯವಾದ ಮೌಂಟ್ ಎವೆರೆಸ್ಟ್ ನೋಡಿದ ಅನುಭವ ಎಂದಿಗೂ ಮರೆಯಲಾಗದು” ಎಂದು ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.