Latest

ಮಲತಂದೆಯಿಂದ ಅತ್ಯಾಚಾರ- 10 ವರ್ಷದ ಬಾಲಕಿ ಈಗ 5 ತಿಂಗಳ ಗರ್ಭಿಣಿ

Published

on

Share this

ರೋಹ್ಟಕ್: ಮಲತಂದೆಯಿಂದ ಸತತವಾಗಿ ಅತ್ಯಾಚಾರಕ್ಕೊಗಾಗಿ 10 ವರ್ಷದ ಬಾಲಕಿ ಗರ್ಭಿಣಿಯಾಗಿರೋ ಆಘಾತಕಾರಿ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ಬೆಳಕಿಗೆ ಬಂದಿದೆ.

ಶುಕ್ರವಾರದಂದು ಇಲ್ಲಿನ ಆಸ್ಪತ್ರೆಯೊಂದಕ್ಕೆ ಬಾಲಕಿಯನ್ನ ದಾಖಲಿಸಲಾಗಿದ್ದು, ಈ ವೇಳೆ ಆಕೆ 5 ತಿಂಗಳ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಬಿಹಾರದಿಂದ ವಲಸೆ ಬಂದು ಕಾರ್ಮಿಕರಾಗಿರುವ ಬಾಲಕಿಯ ತಾಯಿ ಮಗಳ ಸ್ಥಿತಿ ನೋಡಿ ವೈದ್ಯರ ಬಳಿ ಚೆಕ್‍ಅಪ್‍ಗಾಗಿ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಅತ್ಯಾಚಾರದ ಬಗ್ಗೆ ದೃಢಪಡಿಸಿದ್ದಾರೆ. ನಂತರ ಬಾಲಕಿ ಅಮ್ಮನ ಬಳಿ ನಡೆದ ವಿಷಯವನ್ನ ಹೇಳಿಕೊಂಡಿದ್ದಾಳೆ. ದೀರ್ಘ ಕಾಲದಿಂದ ಮಲತಂದೆ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

ನಂತರ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೋಹ್ಟಕ್‍ನ ಪಿಜಿಐಎಮ್‍ಎಸ್‍ನ ವೈದ್ಯಕೀಯ ಮಂಡಳಿ ಸೋಮವಾರದಂದು ಸಭೆ ಸೇರಲಿದ್ದು ಮಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಗ್ಯಾಂಗ್ ರೇಪ್- ಮುಖವನ್ನ ಇಟ್ಟಿಗೆಯಿಂದ ಹೊಡೆದ್ರು, ಛಿದ್ರವಾದ ಸ್ಥಿತಿಯಲ್ಲಿ ಶವ ಪತ್ತೆ

Click to comment

Leave a Reply

Your email address will not be published. Required fields are marked *

Advertisement
Advertisement