ರೋಹ್ಟಕ್: ಅಪ್ರಾಪ್ತೆಯ ಮೇಲೆ ಆಕೆಯ ತಾಯಿಯ ಗೆಳೆಯರೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದು, ಅಮ್ಮನೇ ಅದರ ವೀಡಿಯೋ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹರಿಯಾಣದ ರೋಹ್ಟಕ್‍ನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿ ಓದುತ್ತಿರುವ 16 ವರ್ಷದ ಬಾಲಕಿಯ ಮೇಲೆ ಅದೇ ಗ್ರಾಮದ ರಾಮ್ಬಗತ್, ದಿನೇಶ್ ಮತ್ತು ಕಮಲ್ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಇದನ್ನು ತಾಯಿ ವೀಡಿಯೋ ಮಾಡಿದ್ದಾಳೆ ಅಂತಾ ಬಾಲಕಿ ಪೊಲೀಸರ ಮುಂದೆ ಹೇಳಿದ್ದಾಳೆ.
Advertisement
ಬಾಲಕಿಯ ತಾಯಿ ಈ ಮೂವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಂತೆಯೇ ತಾಯಿ ಅವರೊಂದಿಗೆ ಕಾಲ ಕಳೆಯುತ್ತಿರುವುದನ್ನು ಬಾಲಕಿ ಗಮನಿಸಿದ್ದಾಳೆ. ಆ ಬಳಿಕ ತಾಯಿ ತನ್ನ ಮಗಳ ಮೇಲೆಯೇ ಮೂವರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾಳೆ
Advertisement
ವೀಡಿಯೋ ಕೂಡ ಮಾಡಿಕೊಂಡಿದ್ದು, ವಿಚಾರ ಬಹಿರಂಗಪಡಿಸಿದ್ರೆ ವೀಡಿಯೋವನ್ನು ವೈರಲ್ ಮಾಡುತ್ತೇನೆ ಅಷ್ಟೇ ಅಲ್ಲದೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಮಗಳು ದೂರಿನಲ್ಲಿ ಆರೋಪಿಸಿದ್ದಾಳೆ.
Advertisement
ಸದ್ಯ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.