ಮುಂಬೈ: ಟೀಂ ಇಂಡಿಯಾ ನಾಯಕ ಹಾಗೂ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಯಶಸ್ವಿ ಪ್ರದರ್ಶನ ಮುಂದುವರಿದಿದೆ. ಐಪಿಎಲ್‌ನಲ್ಲಿ ಶೂನ್ಯ ಸುತ್ತಿ ತೀವ್ರ ಮುಖಭಂಗಕ್ಕೀಡಾಗಿದ್ದ ರೋಹಿತ್ ಶರ್ಮಾ ಈಗ ಫಾರ್ಮ್‌ನಲ್ಲಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈಗಾಗಲೇ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುನ್ನಡೆ ಸಾಧಿಸಿದೆ. ಬೆಸ್ಟ್ ಆಫ್ 3ರಲ್ಲಿ ಕ್ರಮವಾಗಿ 50 ಹಾಗೂ 49 ರನ್‌ಗಳ ಅಂತರದಿಂದ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3ನೇ ಪಂದ್ಯದಲ್ಲಿ ಗೆದ್ದು ಇಂಗ್ಲೆಂಡ್ ತವರಲ್ಲೇ ವೈಟ್‌ವಾಶ್ ಮಾಡುವ ಗುರಿ ಹೊಂದಿದೆ. ಈ ನಡುವೆ ನಾಯಕ ರೋಹಿತ್ ಶರ್ಮಾ ಮತ್ತೊಂದು ವಿಶ್ವದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ
ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟುವ ಅವಕಾಶ: ಇಂಗ್ಲೆಂಡ್ ವಿರುದ್ಧದ ಟಿ20ಯ 2 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ರೋಹಿತ್ ನಾಯಕನಾಗಿ ಸತತ 19 ಪಂದ್ಯಗಳನ್ನ ಗೆದ್ದಂತಹ ಸಾಧನೆ ಮಾಡಿದ್ದಾರೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯಲಿರುವ 3ನೇ ಪಂದ್ಯವನ್ನೂ ಗೆದ್ದರೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ನೇಮಕ
2003ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡವು 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದು ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಅತಿದೊಡ್ಡ ಗೆಲುವಾಗಿದೆ. ಆದರೆ ಈಗಾಗಲೇ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರೋಹಿತ್ ಶರ್ಮಾ ತಂಡವು ಇನ್ನೊಂದು ಪಂದ್ಯದಲ್ಲಿ ಗೆದ್ದರೆ ರೋಹಿತ್ ವಿಶ್ವದಾಖಲೆಗೆ ಖ್ಯಾತಿಯಾಗಲಿದ್ದಾರೆ.
ಟಿ20 ನಾಯಕತ್ವದ ದಾಖಲೆ: ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಅಮೋಘ ದಾಖಲೆ ಬರೆದಿದ್ದಾರೆ. ಇದುವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿರುವ ರೋಹಿತ್ ಶರ್ಮಾ 26 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದು, ಇವರ ನಾಯಕತ್ವದಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಭಾರತ ಸೋತಿದೆ. ಇನ್ನು ಗೆಲುವಿನಲ್ಲಿ ಶೇ.86.66ರಷ್ಟು ಸರಾಸರಿ ಹೊಂದಿದ್ದಾರೆ.