ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡ ಕ್ಯಾಪ್ಟನ್, ಹಿಟ್ ಮ್ಯಾನ್, ಅತೀ ಹೆಚ್ಚು ಮಹಿಳಾ ಫ್ಯಾನ್ಸ್ (Women Cricket Fans) ಹೊಂದಿರುವ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma). ಇನ್ನೂ 10-20 ವರ್ಷಗಳ ನಂತರ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದು ರೋಹಿತ್ ಶರ್ಮಾ. ಈ ಪರಿ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ರೋಹಿತ್ ಶರ್ಮಾ.
Advertisement
ರೋಹಿತ್ ಶರ್ಮಾ ಅವರು ಈ ಮಟ್ಟಕ್ಕೆ ಬೆಳೆಯಲು ಕಠಿಣಶ್ರಮವೇ ಕಾರಣ. ಯಶಸ್ಸಿಗೆ ಮತ್ತೇನಾದ್ರೂ ಸೂತ್ರ ಇದೆಯಾ ಅಂತ ರೋಹಿತ್ ಅವರನ್ನೊಮ್ಮೆ ಕೇಳಿ ನೋಡಿದ್ರೆ ಅವರು ಕೊಡುವ ಆನ್ಸರ್, `ಹಾರ್ಡ್ ವರ್ಕ್.. ಹಾರ್ಡ್ ವರ್ಕ್.. ಓನ್ಲಿ ಹಾರ್ಡ್ ವರ್ಕ್’. ಇದನ್ನೂ ಓದಿ: ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆಯಾಚಿಸಿದ ಡೇವಿಡ್ ವಾರ್ನರ್ – ಏಕೆ ಗೊತ್ತೇ?
Advertisement
ತನ್ನನ್ನು ಈ ಕಠಿಣ ಪರಿಶ್ರಮವೇ ಗೆಲ್ಲಿಸಬಲ್ಲದು ಎಂದು ರೋಹಿತ್ ಅವರಿಗೆ ಅರಿವಾದದ್ದು ಬಾಲ್ಯದಲ್ಲಿ. ಇದು ಬಡತನದಿಂದ ಕಲಿತ ಪಾಟವೂ ಹೌದು. ರೋಹಿತ್ ಶರ್ಮಾ ಇಂದು ನೂರಾರು ಕೋಟಿ ಆಸ್ತಿಗೆ ಓಡೆಯನಾಗಿದ್ದಾರೆ, ಒಂದೇ ಒಂದು ಐಪಿಎಲ್ ಟೂರ್ನಿಯನ್ನಾಡಿದ್ರೆ ಸಾಕು, ಕೋಟಿ ಕೋಟಿ ಹಣ ಕಾಲಬಳಿ ಬಂದು ಬೀಳುತ್ತೆ, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ದುಬಾರಿ ಹೋಟೆಲ್ ಗಳಲ್ಲಿ ತಂಗುತ್ತಾರೆ. ಆದ್ರೆ ಬಾಲ್ಯದಲ್ಲಿ ಅವರ ಬದುಕಿನ ಸ್ಥಿತಿಯನ್ನೂ ಕೇಳಿದ್ರೆ ನಿಜಕ್ಕೂ ಹೌದೇ ಎನ್ನುವಷ್ಟು ಅಚ್ಚರಿಯಾಗುತ್ತದೆ.
Advertisement
Advertisement
ಅಚ್ಚರಿಯಾದರೂ ನೀವು ನಂಬಲೇಬೇಕು. ಅಂದು ರೋಹಿತ್ ಶರ್ಮಾ ಅವರಿಗೆ ಸರಿಯಾಗಿ ಮನೆ ಕೂಡ ಇರಲಿಲ್ಲ. ಮಲಗಲು ಮನೆಯಲ್ಲಿ ಜಾಗ ಸಾಲದೇ ಇದ್ದ ಕಾರಣಕ್ಕಾಗಿಯೇ ರೋಹಿತ್ ಶರ್ಮಾರನ್ನು ಅವರ ತಂದೆ-ತಾಯಿ, ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಬಾಲ್ಯದಲ್ಲಿ ಪ್ರತಿ ಮಗು ಬಯಸೋದು ತನ್ನ ತಂದೆ-ತಾಯಿ ಜೊತೆ ಇರಬೇಕು ಅಂತ. ಆ ದಿನಗಳಲ್ಲಿ ಅಮ್ಮನೇ ಪ್ರಪಂಚ, ಅಪ್ಪನೇ ಆಕಾಶ. ಆದ್ರೆ, ರೋಹಿತ್ ಅವರಿಗೆ ಅದೊಂದು ಕನಸಾಗಿತ್ತು. ಅಪ್ಪ-ಅಮ್ಮನನ್ನು ನೋಡೋದಕ್ಕಾಗಿ ಅವರು ವಾರಗಟ್ಟಲೇ ಅಥವಾ ತಿಂಗಳಾನುಗಟ್ಟಲೇ ಕಾಯಬೇಕಿತ್ತು. ತಿಂಗಳಲ್ಲಿ ಮೂರು ದಿನ ಮಾತ್ರ ಅಪ್ಪ-ಅಮ್ಮನೊಂದಿಗಿರಲು ರೋಹಿತ್ ಅವರಿಗೆ ಅವಕಾಶ ಸಿಗುತ್ತಿತ್ತು. ಇದನ್ನೂ ಓದಿ: ಶಾಲೆಗೆ ಸೇರಿಸಲು ಶರ್ಮಾ ಪೋಷಕರಲ್ಲಿ 275 ರೂ. ಫೀಸ್ ಕೂಡ ಇರ್ಲಿಲ್ಲ – ಬಾಲ್ಯದಲ್ಲಿ ಹಿಟ್‌ಮ್ಯಾನ್ ಕಷ್ಟದ ಜೀವನ!
ರೋಹಿತ್ ಹುಟ್ಟಿದ್ದು ಮಹಾರಾಷ್ಟ್ರದ ನಾಗ್ಪುರದಲ್ಲಿ. ತಂದೆ ಗುರುನಾಥ್ ಶರ್ಮಾ, ತಾಯಿ ಪೂರ್ಣಿಮಾ ಶರ್ಮಾ. ತಂದೆ ಸಾರಿಗೆ ಸಂಸ್ಥೆಯ ಉಗ್ರಾಣ ನೋಡಿಕೊಳ್ಳುತ್ತಿದ್ದರು. ಅವರಿಗೆ ಬರುತ್ತಿದ್ದ ಅಲ್ಪ-ಸ್ವಲ್ಪ ಹಣದಲ್ಲೇ ಮನೆ ಸಾಗಬೇಕಿತ್ತು. ಗುರುನಾಥ್ ಮತ್ತು ಪೂರ್ಣಿಮಾಗೆ ಮತ್ತೊಂದು ಮಗುವಾದಾಗ 3ನೇ ವ್ಯಕ್ತಿಗೆ ಆ ಮನೆಯಲ್ಲಿ ಉಳಿದುಕೊಳ್ಳುವಷ್ಟೂ ಜಾಗವೇ ಇರಲಿಲ್ಲ. ಅದೊಂದು ಚಿಕ್ಕ ಕೋಣೆಯಂತಿದ್ದ ಮನೆ ಆಗಿತ್ತು. ಹಾಗಾಗಿ ರೋಹಿತ್ ನನ್ನು ಮುಂಬೈನ ಬೊರಿವಲಿಯಲ್ಲಿ ವಾಸವಿದ್ದ ಅಜ್ಜಿ ಮನೆಯಲ್ಲಿ ಬಿಟ್ಟರು ತಂದೆ ತಾಯಿ. ತಮ್ಮನಿಗಾಗಿ ರೋಹಿತ್ ಹುಟ್ಟಿದ ಮನೆಯನ್ನೇ ತೊರೆಯಬೇಕಾಯಿತು. ಇದನ್ನೂ ಓದಿ: ರೋಹಿತ್ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್ ಹೆಡ್ ಮಾತು
ಬಾಲ್ಯದಿಂದಲೇ ರೋಹಿತ್‌ಗೆ ಕ್ರಿಕೆಟ್ ಅಂದರೆ ಪ್ರಾಣ. ಮುಂಬೈಗೆ ಬಂದ ಮೇಲೆ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್ ಆಡಿಕೊಂಡಿದ್ದರು. ಶಾಲಾ ದಿನಗಳಲ್ಲಿ ಕ್ರಿಕೆಟ್ ಬಗೆಗಿದ್ದ ಒಲವು ಹೆಚ್ಚಾಯಿತು. ಈತನೊಳಗೆ ಕ್ರೀಡಾ ಆಸಕ್ತಿ ಕಂಡ ಚಿಕ್ಕಪ್ಪ ತಮಗೆ ಕಷ್ಟವಿದ್ದರೂ ರೋಹಿತ್‌ಗೆ ಕ್ರಿಕೆಟ್ ತರಬೇತಿ ಕೊಡಿಸಲು ಮುಂದಾದರು. ಆದ್ರೆ, ತರಬೇತಿ ಕೊಡಿಸಲು ಹಣ ಸಾಲುತ್ತಿಲ್ಲ ಎನ್ನುವ ಒದ್ದಾಟವೂ ಅವರಲ್ಲಿತ್ತುಅ. ಇದೇ ಸಮಯದಲ್ಲಿ ಸಿಕ್ಕಿದ್ದು ಕೋಚ್ ದಿನೇಶ್ ಲಾಡ್. ಬಾಲ್ಯದಲ್ಲಿ ರೋಹಿತ್ ಪ್ರತಿಭೆ ಕಂಡು, ತಾವು ಕೋಚ್ ಮಾಡುತ್ತಿದ್ದ ಸ್ವಾಮಿ ವಿವೇಕಾನಂದ ಸ್ಕೂಲ್‌ಗೆ ಸೇರಿಕೊಳ್ಳುವಂತೆ ರೋಹಿತ್‌ಗೆ ಸಲಹೆ ನೀಡಿದರು. ಅದು ದುಬಾರಿ ಸ್ಕೂಲ್ ಆಗಿದ್ದರಿಂದ, ಫೀಸ್ ಕಟ್ಟಲು ತಮ್ಮಲ್ಲಿ ಹಣವಿಲ್ಲ ಅಂದಿದ್ದರು ರೋಹಿತ್. ಹೇಗಾದರೂ ಮಾಡಿ, ಈ ಹುಡುಗನಿಗೆ ಒಳ್ಳೆಯ ತರಬೇತಿ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದು ಎಂದು ಕನಸು ಕಂಡಿದ್ದ ಕೋಚ್ ಲಾಡ್, ಉಚಿತವಾಗಿ ಆ ಶಾಲೆಯಲ್ಲಿ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾದರು.
ದುಬಾರಿ ಶಾಲೆಯಲ್ಲಿ ಕಲಿಯಲು ಮತ್ತು ಕ್ರಿಕೆಟ್ ತರಬೇತಿ ಪಡೆಯಲು ಉಚಿತವಾಗಿ ಅವಕಾಶವೇನೂ ಸಿಕ್ಕಿತು. ಕ್ರಿಕೆಟ್ ಕಿಟ್ ಕೊಳ್ಳಲು ಏನು ಮಾಡೋದು? ಅದಕ್ಕೆ ಉಪಾಯ ಮಾಡಿದ್ದರು ರೋಹಿತ್. ದಿನವೂ ಬೆಳಗ್ಗೆ ಎಂದು ಮನೆ ಮನೆಗೆ ಹಾಲಿನ ಪ್ಯಾಕೇಟ್ ಹಾಕುತ್ತಿದ್ದರು. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ, ಹಣ ಸಂಪಾದಿಸಿ ಕ್ರಿಕೆಟ್ ಕಿಟ್ ಕೊಂಡುಕೊಂಡಿದ್ದರು. ಕೋಚ್ ದಿನೇಶ್ ಲಾಡ್ ಗರಡಿಯಲ್ಲಿ ಸಖತ್ ತಯಾರಿಯಾದರು. ನಂತರದ ದಿನಗಳಲ್ಲಿ ಹಲವಾರು ವೈಫಲ್ಯ ಕಂಡರೂ, ಅವರ ಗುರಿ ಮಾತ್ರ ಗೆಲುವಿನ ಕಡೆಯೇ ಇರುತ್ತಿತ್ತು. 2011ರಲ್ಲಿ ವಿಶ್ವಕಪ್ ತಂಡದಿಂದ ಹೊರಗುಳಿದ್ದ ಈ ರೋಹಿತ್ ಶರ್ಮಾ, 2023ರಲ್ಲಿ ತಾನೇ ನಾಯಕನಾಗಿ ಮುನ್ನಡೆಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. 2023ರ ವಿಶ್ವಕಪ್ ಕೈತಪ್ಪಿದರೂ, ರೋಹಿತ್ ಶರ್ಮಾ 2 ಬಾರಿ ತಮ್ಮ ನಾಯಕತ್ವದಲ್ಲಿ ಐಸಿಸಿ ಏಷ್ಯಾಕಪ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ