ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಶಮಿ ಅವರ ಬೌಲಿಂಗ್ ಹಿಂದಿನ ಗುಟ್ಟನ್ನು ರಿವೀಲ್ ಮಾಡಿದ್ದಾರೆ.
ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ಪಡೆಯದ ಮೊಹಮ್ಮದ್ ಶಮಿ 2ನೇ ಇನ್ನಿಂಗ್ಸ್ ನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದರು. ಅಲ್ಲದೇ ಇವರ ಬೌಲಿಂಗ್ ವೇಗಕ್ಕೆ ಸ್ಟಂಪ್ ಮುರಿದಿದ್ದು ಸಾಕ್ಷಿಯಾಗಿತ್ತು. ಬಿಸಿಸಿಐ ಕೂಡ ಶಮಿರ ಬೌಲಿಂಗ್ ವೇಗದ ಫೋಟೋಗಳನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದೆ.
Advertisement
Awesome bowling by Mohammad Shami pic.twitter.com/yAwhWrna27
— S.Rashid Ali (@rashidali779) October 6, 2019
Advertisement
ಶಮಿ ಬೌಲಿಂಗ್ ದಾಳಿಯ ಕುರಿತು ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಶಮಿ ಬಿರಿಯಾನಿ ತಿಂದಿದ್ದೆ ಅವರ ಅದ್ಭುತ ಬೌಲಿಂಗ್‍ಗೆ ಕಾರಣ ಎಂದಿದ್ದಾರೆ. ಅಲ್ಲದೇ ಬಿರಿಯಾನಿ ತಿಂದ ಬಳಿಕ ಶಮಿ ಹೆಚ್ಚು ಉತ್ಸಾಹದಿಂದ ಬೌಲಿಂಗ್ ಮಾಡಿದ್ದರು ಎಂದು ಹೇಳಿದ್ದಾರೆ.
Advertisement
ಅಂತಿಮ ದಿನದಾಟದ ಮಧ್ಯಾಹ್ನದ ವಿರಾಮದ ವೇಳೆಗೆ ಶಮಿ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿ, ಕ್ವಿಂಟನ್ ಡಿಕಾಕ್, ತೆಂಬಾ ಬಾವುಮಾ ವಿಕೆಟ್ ಪಡೆದಿದ್ದರು. ಅದರಲ್ಲೂ ತಮ್ಮ ವಿಕೆಟ್ ಪಡೆದ ಶಮಿರ ಬೌಲಿಂಗ್ ಕಂಡು ಡಿಕಾಕ್ ಕ್ಷಣ ಕಾಲ ಅಚ್ಚರಿಗೊಂಡು ಕ್ರಿಸ್‍ನಲ್ಲಿಯೇ ನಿಂತಿದ್ದರು. ಅಲ್ಲದೇ ಅಂತಿಮವಾಗಿ ತಂಡದ ಗೆಲುವಿಗೆ ಕಂಟಕವಾಗಿದ್ದ ರಬಾಡರ ವಿಕೆಟ್ ಉರುಳಿಸಿ ತಂಡಕ್ಕೆ ಶಮಿ ಗೆಲುವಿನ ಸಿಹಿ ನೀಡಿದ್ದರು. ಪಂದ್ಯದಲ್ಲಿ ಶಮಿ 5 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು.
Advertisement
https://www.instagram.com/p/B3Rbg47AQvR/