ಮುಂಬೈ: ಆ ಇಬ್ಬರು ಡೆಡ್ಲಿ ಬೌಲರ್ ಗಳನ್ನು ಎದುರಿಸಲು ತುಂಬ ಕಷ್ಟ ಎಂದು ಹೇಳುವ ಮೂಲಕ ಭಾರತದ ಕ್ರಿಕೆಟ್ ತಂಡ ಉಪನಾಯಕ ರೋಹಿತ್ ಶರ್ಮಾ ಅವರು ತಮ್ಮ ಜೀವನದ ಅಕ್ರಮಣಾಕಾರಿ ಬೌಲರ್ ಗಳ ಬಗ್ಗೆ ಮಾತನಾಡಿದ್ದಾರೆ.
ಕೊರೊನಾ ಲಾಕ್‍ಡೌನ್ ನಿಂದ ವಿಶ್ವದಲ್ಲೇ ಕ್ರೀಡಾ ಚಟುವಟಿಕೆಗಳು ನಿಂತು ಹೋಗಿದೆ. ಈ ಕಾರಣದಿಂದ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಕ್ರೀಡಾ ಅನುಭವವನ್ನು ಹಂಚಿಕೊಳ್ಳಿತ್ತಿದ್ದಾರೆ. ಅಂತಯೇ ರೋಹಿತ್ ಶರ್ಮಾ ಅವರು ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಜೊತೆ ಲೈವ್ ಬಂದಿದ್ದು, ಈ ವೇಳೆ ತಾನು ಎದುರಿಸಿದ ಬೆಸ್ಟ್ ಬೌಲರ್ ಗಳ ಬಗ್ಗೆ ಮಾತನಾಡಿದ್ದಾರೆ.
Advertisement
Advertisement
ಲೈವ್‍ನಲ್ಲಿ ಮಾತನಾಡುತ್ತಿದ್ದ ಶಮಿ ಅವರು ರೋಹಿತ್ ಶರ್ಮಾವರನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಇಷ್ಟವಾಗುವ ಇಬ್ಬರು ಬೌಲರ್ ಗಳ ಹೆಸರನ್ನು ತಿಳಿಸಿ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರೋಹಿತ್ ನನಗೆ ಈ ಪ್ರಸ್ತುತ, ಸೌತ್ ಆಫ್ರಿಕಾದ ವೇಗಿ ಕಗಿಸೊ ರಬಡಾ ಮತ್ತು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜೆಲ್‍ವುಡ್ ಎಂದರೆ ಇಷ್ಟ ಎಂದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಬ್ರೆಟ್ ಲೀ ಮತ್ತು ಸೌತ್ ಆಫ್ರಿಕಾದ ಡೇಲ್ ಸ್ಟೇನ್ ಅವರನ್ನು ಎದುರಿಸುವುದು ಕಷ್ಟ ಎಂದು ತಿಳಿಸಿದ್ದಾರೆ.
Advertisement
Advertisement
ನಾನು ಭಾರತ ತಂಡಕ್ಕೆ ಆಯ್ಕೆ ಆಗಿ ಬಂದಾಗ ಆಗ ಸದ್ಯಕ್ಕೆ ಬ್ರೆಟ್ ಲೀ ಅವರು ವಿಶ್ವದಲ್ಲೇ ಡೆಡ್ಲಿ ವೇಗದ ಬೌಲರ್ ಆಗಿದ್ದರು. ನಂತರ ನಾನು ಸೌತ್ ಆಫ್ರಿಕಾ ವಿರುದ್ಧ ನನ್ನ ಮೊದಲ ಏಕದಿನ ಸರಣಿ ಆಡಲು ಐರ್ಲೆಂಡ್‍ಗೆ ಹೋಗಿದ್ದೆ. ಆಗ ಡೇಲ್ ಸ್ಟೇನ್ ಅವರ ವಿರುದ್ಧ ಆಡಲು ತುಂಬ ಕಷ್ಟವಾಗಿತ್ತು. ಹಾಗಾಗಿ ನಾನು ಲೀ ಮತ್ತು ಸ್ಟೇನ್ ಅವರನ್ನು ತುಂಬ ಇಷ್ಟಪಡುತ್ತೇನೆ. ಜೊತೆಗೆ ಅವರ ವಿರುದ್ಧ ಬ್ಯಾಟ್ ಬೀಸುವುದು ತುಂಬ ಕಷ್ಟ ಎಂದು ಹಿಟ್‍ಮ್ಯಾನ್ ಹೇಳಿದ್ದಾರೆ.
ಈಗ ಇರುವ ಪ್ರಸ್ತುತ ಬೌಲರ್ ಗಳಲ್ಲಿ ನನಗೆ ರಬಡಾ ಮತ್ತು ಹ್ಯಾಜೆಲ್‍ವುಡ್ ಬಹಳ ಇಷ್ಟವಾಗುತ್ತಾರೆ. ಏಕೆಂದರೆ ರಬಡಾ ಬಹಳ ಒಳ್ಳೆಯ ಬೌಲರ್ ಜೊತೆಗೆ ಅಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಾರೆ. ಅಂತಯೇ ಜೋಶ್ ಹ್ಯಾಜೆಲ್‍ವುಡ್ ಕೂಡ ಒಳ್ಳೆಯ ಬೌಲರ್ ಅವರು ಶಿಶ್ತುಬದ್ಧವಾಗಿ ಬೌಲ್ ಮಾಡುತ್ತಾರೆ ಎಂದು ರೋಹಿತ್ ಶರ್ಮಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಪೀಳಿಗೆಯ ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್ ಮನ್ ಎಂದು ಪರಿಗಣಿಸಲ್ಪಟ್ಟ 33 ವರ್ಷದ ರೋಹಿತ್ 2007ರಲ್ಲಿ ಟೀಂ ಇಂಡಿಯಾಗೆ ಪ್ರವೇಶ ಪಡೆದರು. ಆದಾಗ್ಯೂ ಅವರು ಮೊದಲ ಆರು ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದರು. ಈ ವೇಳೆ ತಂಡದ ನಾಯಕನಾಗಿದ್ದ ಎಂ.ಎಸ್.ಧೋನಿ ಅವರನ್ನು ಓಪನರ್ ಆಗಿ ಮೈದಾನಕ್ಕಿಳಿಸಿದ ಮೇಲೆ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ರೋಹಿತ್ ಅವರು ವೈಟ್-ಬಾಲ್ ಕ್ರಿಕೆಟ್‍ನ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 3 ಬಾರಿ ಏಕದಿನ ದ್ವಿಶತಕ ಗಳಿಸಿದ ಏಕೈಕ ಬ್ಯಾಟ್ಸ್ ಮನ್ ರೋಹಿತ್ ಏಕದಿನ, ಟಿ-20 ಹಾಗೂ ಟೆಸ್ಟ್ ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ರೋಹಿತ್ ಶರ್ಮಾ 2013, 2014ರಲ್ಲಿ ಶ್ರೀಲಂಕಾ ಮತ್ತು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ನಂತರ ಈ ಸಾಧನೆ ಮಾಡಿದ ಮೂರನೇ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.