ಮೆಲ್ಬರ್ನ್: ಜಿಂಬಾಬ್ವೆ (Zimbabwe) ವಿರುದ್ಧ ಗೆದ್ದು ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಬಲಗೈಗೆ ಬಲವಾದ ಪೆಟ್ಟುಮಾಡಿಕೊಂಡಿದ್ದಾರೆ.
Advertisement
ಇಂಗ್ಲೆಂಡ್ (England) ವಿರುದ್ಧ ಗುರುವಾರ ನಡೆಯಲಿರುವ ಟಿ20 ವಿಶ್ವಕಪ್ (T20 WorldCup) ಸೆಮಿಫೈನಲ್‌ಗೆ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಪೆಟ್ಟು ಮಾಡಿಕೊಂಡಿದ್ದಾರೆ. ನೆಟ್ ಸೆಷನ್‌ನಲ್ಲಿ ಎಸ್. ರಘು ಅವರಿಂದ ಥ್ರೋಡೌನ್ ತೆಗೆದುಕೊಳ್ಳುತ್ತಿದ್ದಾಗ ಶಾರ್ಟ್‌ಬಾಲ್ ಅವರ ಬಲಗೈಗೆ ಬಡಿದಿದೆ. 150 ಪ್ಲಸ್ ವೇಗದಲ್ಲಿ 18 ಯಾರ್ಡ್‌ಗಳಿಂದ ಎಸೆಯಲ್ಪಟ್ಟ ಥ್ರೋಡೌನ್ ಅನ್ನು ರೋಹಿತ್ ಶಾರ್ಟ್ ಆರ್ಮ್ ಮಾಡಲು ಯತ್ನಿಸಿದರು. ಈ ವೇಳೆ ಕೈಗೆ ಪೆಟ್ಟಾಗಿದೆ, ಇದರಿಂದ ತೀವ್ರ ನೋವುಂಟಾಗಿ ತಕ್ಷಣವೇ ಅವರು ನೆಟ್ ತೊರೆದಿದ್ದಾರೆ. ಇದನ್ನೂ ಓದಿ: ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್
Advertisement
Advertisement
ವೈದ್ಯಕೀಯ ತಂಡ (Medical Team) ಪರಿಶೀಲಿಸಿದ್ದು, ಯಾವುದೇ ಮುರಿತ ಕಂಡುಬಂದಿಲ್ಲ ಎಂದು ಹೇಳಿದೆ. ಸೆಮಿಸ್ ಹತ್ತಿರದ ಸಂದರ್ಭದಲ್ಲಿ ರೋಹಿತ್ ನಾಯಕತ್ವ ಬಹಳ ಮುಖ್ಯವಾಗಿದ್ದು, ಸದ್ಯ ಅವರ ಕೈಗೆ ಪೆಟ್ಟಾಗಿರುವುದರಿಂದ ಟೀಂ ಇಂಡಿಯಾ ತೀವ್ರ ಆಘಾತಕ್ಕೆ ಒಳಗಾಗಿದೆ. ಇದನ್ನೂ ಓದಿ: 2024ರ T20 ವಿಶ್ವಕಪ್‍ಗೆ 20 ತಂಡ – ಯಾವೆಲ್ಲ ತಂಡಗಳಿಗೆ ನೇರ ಪ್ರವೇಶ?
Advertisement
ಭಾನುವಾರ ಭಾರತ ಹಾಗೂ ಜಿಂಬಾಬ್ವೆ (Zimbabwe) ನಡುವಿನ ಕಾದಾಟದಲ್ಲಿ ಟೀಂ ಇಂಡಿಯಾ 71 ರನ್‌ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಭಾರತ ನೀಡಿದ 187 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 17.2 ಓವರ್‌ಗಳಲ್ಲೇ 115 ರನ್‌ಗಳಿಗೆ ಆಲೌಟ್ ಆಯಿತು.