ಮೆಲ್ಬರ್ನ್: ಭಾರತ (India) ಹಾಗೂ ಜಿಂಬಾಬ್ವೆ (Zimbabwe) ನಡುವಿನ ಪಂದ್ಯದ ನಡುವೆ ಹಿಟ್‍ಮ್ಯಾನ್ ರೋಹಿತ್ ಶರ್ಮಾರ (Rohit Sharma) ಅಭಿಮಾನಿಯೋರ್ವ (Fan) ಮೈದಾನಕ್ಕೆ ನುಗ್ಗಿ ಬರೋಬ್ಬರಿ 6.5 ಲಕ್ಷ ರೂ. ದಂಡ (Fine) ಕಟ್ಟುವಂತಾಗಿದೆ.
Advertisement
ಜಿಂಬಾಬ್ವೆ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದರು. ಒಬ್ಬ ಬಾಲಕ ಏಕಾಏಕಿ ಭಾರತದ ಧ್ವಜ ಹಿಡಿದು ಪ್ರೇಕ್ಷಕರ ಗ್ಯಾಲರಿಯಿಂದ ಹಾರಿ ಮೈದಾನಕ್ಕೆ ಬಂದಿದ್ದಾನೆ. ಬಳಿಕ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದೆಡೆಗೆ ಓಡಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಬಾಲಕನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಬಾಲಕ ಕಣ್ಣೀರಿಟ್ಟಿದ್ದಾನೆ. ರೋಹಿತ್ ಶರ್ಮಾ ಬಾಲಕನನ್ನು ಮೈದಾನಬಿಟ್ಟು ತೆರಳುವಂತೆ ಮನವಿ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈದಾನಕ್ಕೆ ಬಂದ ಬಾಲಕನಿಗೆ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (MCG) 6.5 ಲಕ್ಷ ರೂ. ದಂಡ ಪ್ರಯೋಗಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?
Advertisement
Advertisement
ಇತ್ತ ಭಾರತ ಹಾಗೂ ಜಿಂಬಾಬ್ವೆ ನಡುವಿನ ಕಾದಾಟದಲ್ಲಿ 71 ರನ್‍ಗಳ ಭರ್ಜರಿ ಜಯದೊಂದಿಗೆ ಭಾರತ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಭಾರತ ನಿಡಿದ 187 ರನ್‍ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ
Advertisement
A devotee searching his God Rohit Sharma❤ @ImRo45#RohitSharma???? #T20WorldCuppic.twitter.com/0HLANeXXDD
— Saurabh Yadav (@Saurabhkry__45) November 6, 2022
ಈ ಮೂಲಕ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ (England) ನಡುವೆ ಆಡಿಲೇಡ್‍ನಲ್ಲಿ ನ.10 ರಂದು ಸೆಮಿಫೈನಲ್ (Semi Final) ಪಂದ್ಯ ನಡೆಯಲಿದೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್ – ಭಾರತದ ಪರ ದಾಖಲೆ ಬರೆದ ಸೂರ್ಯ