ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ರಿಂಕು ಸಿಂಗ್ 190 ರನ್‌ಗಳ ಜೊತೆಯಾಟ ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
4.3 ಓವರ್‌ಗಳಲ್ಲಿ 22 ರನ್‌ಗಳಿಸಿದ್ದ ಭಾರತ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 61 ರನ್‌ಗಳನ್ನಷ್ಟೇ ಗಳಿಸಿತ್ತು. ಇದರಿಂದ ಭಾರತ 150 ರನ್ ಗಳಿಸುವುದೂ ಕಷ್ಟವಾಗಿತ್ತು. ಬಳಿಕ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ದ ರೋಹಿತ್-ರಿಂಕು (Rohit – Rinku) 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳ ಜೊತೆಯಾಟವಾಡಿದ (Highest Partnership) ಹಾಗೂ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ
Advertisement
Advertisement
T20I ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್ ಗಳಿಸಿದವರು:
* ಶುಭಮನ್ ಗಿಲ್ 126 ರನ್ – VS ನ್ಯೂಜಿಲೆಂಡ್
* ಋತುರಾಜ್ ಗಾಯಕ್ವಾಡ್ 123 ರನ್ – VS ಆಸ್ಟ್ರೇಲಿಯಾ
* ವಿರಾಟ್ ಕೊಹ್ಲಿ 122 ರನ್ – VS ಅಫ್ಘಾನಿಸ್ತಾನ
* ರೋಹಿತ್ ಶರ್ಮಾ 121 ರನ್ – VS ಅಫ್ಘಾನಿಸ್ತಾನ
Advertisement
Advertisement
T20I ಕ್ರಿಕೆಟ್ ನಲ್ಲಿ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ
* 190* ರನ್- ರೋಹಿತ್ ಶರ್ಮಾ- ರಿಂಕು ಸಿಂಗ್- ಭಾರತ VS ಅಫಘಾನಿಸ್ತಾನ-2024
* 145 ರನ್- ಕುಶಾಲ್ ಮಲ್ಲ- ಡಿ.ಎಸ್ ಏರ್ರೇ- ನೇಪಾಳ VS ಹಾಂಗ್ ಕಾಂಗ್-2023
* 121* ರನ್ – ಮಾರ್ಕ್ ಚಾಪ್ಮನ್- ಜೇಮ್ಸ್ ನಿಶಮ್- ನ್ಯೂಜಿಲೆಂಡ್ VS ಪಾಕಿಸ್ತಾನ-2023
* 119* ರನ್- ಶೋಯೆಬ್ ಮಲ್ಲಿಕ್- ಮಿಸ್ಬಾ ಉಲ್ ಹಕ್- ಪಾಕಿಸ್ತಾನ VS ಆಸ್ಟ್ರೇಲಿಯಾ-2007
* 119* ರನ್-ಕರ್ಟಿಸ್ ಕ್ಯಾಂಫರ್ – ಜಾರ್ಜ್ ಡಾಕ್ರೆಲ್- ಐರ್ಲೆಂಡ್ VS ಸ್ಕಾಟ್ಲೆಂಡ್-2022
ಟಿ20 ಕ್ರಿಕೆಟ್ ನಲ್ಲಿ ಯಾವುದೇ ವಿಕೆಟ್ ಗೆ ಗರಿಷ್ಠ ಜೊತೆಯಾಟ
* 190 ರನ್- ರೋಹಿತ್ ಶರ್ಮಾ – ರಿಂಕು ಸಿಂಗ್ – ಅಫಘಾನಿಸ್ತಾನ ವಿರುದ್ಧ- 2024
* 176 ರನ್ – ಸಂಜು ಸ್ಯಾಮ್ಸನ್ – ದೀಪಕ್ ಹೂಡ – ಐರ್ಲೆಂಡ್ ವಿರುದ್ಧ- 2022
* 165 ರನ್ – ರೋಹಿತ್ ಶರ್ಮಾ – ಕೆಎಲ್ ರಾಹುಲ್ – ಶ್ರೀಲಂಕಾ ವಿರುದ್ಧ- 2017
* 165 – ಯಶಸ್ವಿ ಜೈಸ್ವಾಲ್ – ಶುಭ್ಮನ್ ಗಿಲ್ – ವೆಸ್ಟ್ ಇಂಡೀಸ್ ವಿರುದ್ಧ- 2023
ಒಂದೇ ಓವರ್‌ನಲ್ಲಿ 36 ರನ್ ಚಚ್ಚಿದ ರಿಂಕು-ರೋಹಿತ್:
ಪಂದ್ಯದ 19ನೇ ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 176 ಕಲೆ ಹಾಕಿತ್ತು. ಆದ್ರೆ 20ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಪೈಪೋಟಿಗೆ ಬಿದ್ದಂತೆ ಬ್ಯಾಟ್ ಬೀಸಿದರು. ಕರೀಮ್ ಜನ್ನತ್ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ರೋಹಿತ್ ಒಂದು ಬೌಂಡರಿ, ನೋಬಾಲ್ ಸೇರಿ ಎರಡು ಸಿಕ್ಸರ್, ಒಂದು ರನ್ ಸಿಡಿಸಿದರೇ, ಇನ್ನಿಂಗ್ಸ್‌ನ ಕೊನೆಯ 3 ಎಸೆತಗಳಲ್ಲಿ ರಿಂಕು ಸಿಂಗ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ 36 ರನ್ ಕಲೆಹಾಕಿದರು. ಇದರೊಂದಿಗೆ ತಂಡದ ಮೊತ್ತವನ್ನು 212 ರನ್‌ಗಳಿಗೆ ಏರಿಸಿದರು. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್ ಶರ್ಮಾ