ಕೊಲಂಬೊ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಂಗ್ಲಾ ವಿರುದ್ಧ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಡಿಸಿದ ಸಿಕ್ಸ್ ಹೊಡೆತವನ್ನು ನಾನು ನೋಡಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಕಾರ್ತಿಕ್ ಕೊನೆಯ ಸಿಕ್ಸರ್ ನೋಡಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾ ಆಗುತ್ತದೆ ಎಂದು ತಿಳಿದು ಸೂಪರ್ ಓವರ್ ಗೆ ಸಿದ್ಧತೆ ನಡೆಸಲು ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಪ್ಯಾಡ್ ಧರಿಸಿದ್ದಾಗಿ ತಿಳಿಸಿದರು. ಅಲ್ಲದೇ ದಿನೇಶ್ ಅವರ ಪ್ರದರ್ಶನ ನೋಡಲು ಸಂತಸ ಉಂಟಾಯಿತು. ಈ ಮೂಲಕ ದಿನೇಶ್ ತಮ್ಮ ಸಾಮರ್ಥ್ಯವನ್ನು ತೊರಿಸಿದ್ದಾರೆ ಎಂದು ಹೊಗಳಿದರು.
Advertisement
Advertisement
ಇದೇ ವೇಳೆ ದಿನೇಶ್ ಭಿನ್ನ ಹಾಗೂ ಭಾರೀ ಹೊಡೆತಗಳನ್ನು ಸಿಡಿಸುವ ಕೌಶಲ್ಯ ಹೊಂದಿದ್ದಾರೆ. ಅದ್ದರಿಂದಲೇ ಅವರಿಗೆ ಹಿಂಬಡ್ತಿ ನೀಡಲಾಯಿತು. ಈ ನಿರ್ಧಾರದ ಕುರಿತು ನನಗೆ ಹೆಮ್ಮೆಯಾಗುತ್ತಿದೆ ಎಂದು ರೋಹಿತ್ ತಿಳಿಸಿದರು.
Advertisement
ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ರನ್ನು ಏಳನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ದಿನೇಶ್ ತಿರುವು ನೀಡಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಇದನ್ನೂ ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್
Advertisement
ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೆ 28 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.