ಬ್ರಿಡ್ಜ್‌ಟೌನ್: ಟೀಂ ಇಂಡಿಯಾ (Team India) ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಗೆದ್ದು ವಿಶ್ವಕಪ್ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿದೆ. ಈ ವೇಳೆ ಟೀಂ ಇಂಡಿಯಾ ಆಟಗಾರರರು ವಿಭಿನ್ನವಾಗಿ ಸಂಭ್ರಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡ್‌ನಲ್ಲಿ ನಿರಾಳವಾಗಿ ಕಣ್ಮುಚ್ಚಿ ದೀರ್ಘವಾಗಿ ಉಸಿರೆಳೆದಿದ್ದರು. ಇದೀಗ ನಾನ್ಯಾಕೆ ಹಾಗೆ ಮಾಡಿದ್ದೆ ಎಂಬುದನ್ನು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
This picture epitomises how I’m feeling right now. So many words but can’t find the right ones to express what yesterday meant to me but I will, and I will share them, but right now I’m basking in a dream come true for a billion of us. ❤️🏆 pic.twitter.com/X2eyU3Eaqm
— Rohit Sharma (@ImRo45) June 30, 2024
Advertisement
ನನಗೆ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಲು ಸೂಕ್ತ ಪದಗಳು ಸಿಗುತ್ತಿಲ್ಲ. ಆದರೂ ನಾನದನ್ನೂ ವ್ಯಕ್ತಪಡಿಸಲು ಬಯಸುತ್ತೇನೆ. ಕೋಟ್ಯಂತರ ಟೀಂ ಇಂಡಿಯಾ ಆಭಿಮಾನಿಗಳ ಕನಸು ನನಸಾದ ಆ ಸಂಭ್ರಮದಲ್ಲಿ ಹಾಗೆ ತೇಲಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎರಡು ಮಹತ್ವದ ಜವಾಬ್ದಾರಿ – ಆರ್‌ಸಿಬಿಗೆ ದಿನೇಶ್ ಕಾರ್ತಿಕ್ ರಿಎಂಟ್ರಿ
Advertisement
ಕಪ್ ಗೆದ್ದ ವೇಳೆ ಅವರು ಭಾರತಕ್ಕೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿನ್ನುವ ಮೂಲಕ ರೋಹಿತ್ ಶರ್ಮಾ ಕೃತಜ್ಞತೆಯನ್ನೂ ಸಲ್ಲಿಸಿದ್ದರು. ಅಲ್ಲದೇ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ರೋಹಿತ್ ಖುಷಿ ಹಂಚಿಕೊಂಡಿದ್ದರು. ಟ್ರೋಫಿಯನ್ನು ಅಪ್ಪಿಕೊಂಡು ಸಾರ್ಥಕತೆ ಮೆರೆದಿದ್ದರು. ಪತ್ನಿಯನ್ನು ಅಪ್ಪಿ ರೋಹಿತ್ ಆನಂದಭಾಷ್ಪ ಸುರಿಸಿದ್ದರು.
Advertisement
Advertisement
ವಿಶ್ವಕಪ್ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಟಿ20 ವಿಶ್ವಕಪ್‍ಗೆ ಭಾವುಕ ವಿದಾಯ ಹೇಳಿದರು. ನಾನು ಟಿ20 ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಅದನ್ನು ಆನಂದಿಸಿದ್ದೇನೆ. ಈ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ಕಪ್ ಗೆಲ್ಲುವ ಬಯಕೆಯಿತ್ತು, ಅದನ್ನು ಮಾಡಿದ್ದೇನೆ ಎಂದು ರೋಹಿತ್ ತಿಳಿಸಿದ್ದರು.
ನನ್ನ ತಂಡದಲ್ಲಿ ಈ ರೀತಿಯ ಆಟಗಾರರನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನನಗಾಗಿ ಮತ್ತು ಭಾರತಕ್ಕಾಗಿ ಆಡುತ್ತಿರುವ ಆಟಗಾರರಿಗೆ ನಿಜವಾಗಿಯೂ ಕೃತಜ್ಞರಾಗಿರಬೇಕು ಎಂದಿದ್ದರು. ಇದನ್ನೂ ಓದಿ: ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?