ನವದೆಹಲಿ: ಟೀಂ ಇಂಡಿಯಾ (Team India) ಎರಡನೇ ಬಾರಿ ಟಿ20 ವಿಶ್ವಕಪ್ (T20 World Cup) ಜಯಿಸಿ ವಿಶ್ವದಾಖಲೆ ನಿರ್ಮಿಸಿದೆ. ಈ ವಿಶ್ವದಾಖಲೆ ನಿರ್ಮಾಣಕ್ಕೆ 2023ರ ವಿಶ್ವಕಪ್ ಕ್ರಿಕೆಟ್ ನಂತರ ವೇದಿಕೆ ಸಜ್ಜು ಮಾಡಲಾಗಿತ್ತು.
ಹೌದು. 2024ರ ಟಿ20 ವಿಶ್ವಕಪ್ ಜಯಿಸಲೇಬೇಕೆಂದು ಪಣ ತೊಟ್ಟಿದ್ದ ಬಿಸಿಸಿಐ (BCCI) ಆಸ್ಟ್ರೇಲಿಯಾ (Australia) ವಿರುದ್ಧ ಫೈನಲ್ ಪಂದ್ಯ ಸೋತ ನಂತರ ವಿಶ್ವಕಪ್‌ಗೆ ತಂಡವನ್ನು ಹೇಗೆ ಸಿದ್ಧಪಡಿಸಬೇಕೆಂದು ಗಂಭೀರವಾದ ಚರ್ಚೆ ನಡೆಸಿತು.
Advertisement
ಈ ಚರ್ಚೆಯ ವೇಳೆ ಹಲವು ನಿರ್ಧಾರ ಕೈಗೊಳ್ಳಲಾಯಿತು. ಅದರಲ್ಲೂ ಮೂರು ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಯಿತು. ಒಂದನೇಯದ್ದು ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇನ್ನಿಂಗ್ಸ್ ಆರಂಭಿಸಬೇಕು, ಎರಡನೇಯದ್ದು ತಂಡದಲ್ಲಿ 4 ಮಂದಿ ಆಲ್‌ರೌಂಡರ್ ಇರಲೇಬೇಕು, ಮೂರನೇಯದ್ದು ಮೂವರು ಎಡಗೈ ಸ್ಪಿನ್ನರ್ ಇರಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.
Advertisement
Advertisement
ಗಾಯವಾಗದ ಹೊರತು ಯಾವುದೇ ಕಾರಣಕ್ಕೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಬದಲಿಸಬಾರದು ಎಂಬ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದರೆ ಇಂಡಿಯಾ ಪರ ಆಡುವಾಗ ಮೂರನೇ ಕ್ರಮಾಂಕದಲ್ಲಿ ಬರುತ್ತಿದ್ದರು. ರೋಹಿತ್ ಜೊತೆ ಶುಭಮನ್ ಗಿಲ್, ಇಶನ್ ಕಿಶನ್, ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಇದನ್ನೂ ಓದಿ: ಭಾರತ ಟಿ20 ವಿಶ್ವಕಪ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಜಯ್ ಶಾ – ವೀಡಿಯೋ ವೈರಲ್
Advertisement
ಈ ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೊಹ್ಲಿ ಸೆಮಿಫೈನಲ್‌ವರೆಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. 7 ಪಂದ್ಯಗಳಲ್ಲಿ ಕೇವಲ 75 ರನ್ ಸಿಡಿಸಿದ್ದ ಕೊಹ್ಲಿ ಫೈನಲ್ ಪಂದ್ಯದಲ್ಲಿ 76 ರನ್ ಸಿಡಿಸಿದ್ದರು. ಸಾಧಾರಣವಾಗಿ ಎರಡು, ಮೂರು ಪಂದ್ಯಗಳಲ್ಲಿ ಆಟಗಾರ ವಿಫಲನಾದರೆ ಆತನ ಬದಲು ಬೇರೊಬ್ಬ ಆಟಗಾರನನ್ನು ಆಡಿಸಲಾಗುತ್ತದೆ. ಎಲ್ಲಾ ತಂಡಗಳು ಈ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ. ಆದರೆ ಭಾರತ ವಿರಾಟ್ ಕೊಹ್ಲಿ ಸತತ ಪಂದ್ಯಗಳಲ್ಲಿ ವಿಫಲವಾದರೂ ಅವರನ್ನು ಬದಲಾಯಿಸಲೇ ಇಲ್ಲ. ಸೆಮಿ ಫೈನಲ್ ವೇಳೆ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಅವರು ಕೊಹ್ಲಿ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂದು ಭವಿಷ್ಯ ಸಹ ನುಡಿದಿದ್ದರು.
ಸ್ಪಿನ್ನರ್‌ಗಳ ತಂಡಕ್ಕೆ ಬೇಕು ಹೌದು. ಆಯ್ಕೆ ಮಾಡುವಾಗ ಎಡಗೈ, ಬಲಗೈ ಬಗ್ಗೆ ಜಾಸ್ತಿ ತಂಡಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಒಬ್ಬರು ಎಡಗೈ ಇದ್ದರೆ, ಇಬ್ಬರು ಬಲಗೈ ಅಥವಾ ಇಬ್ಬರು ಬಲಗೈ ಇದ್ದರೆ ಒಬ್ಬರು ಎಡಗೈ ಸ್ಪಿನ್ನರ್‌ಗಳನ್ನು ಆಡಿಸುತ್ತಾರೆ. ಆದರೆ ಮೂವರು ಎಡಗೈ ಸ್ಪಿನ್ನರ್‌ಗಳನ್ನೇ ಟೀಂ ಇಂಡಿಯಾ ಗ್ರೂಪ್ 8, ಸೆಮಿ ಫೈನಲ್, ಫೈನಲ್‌ನಲ್ಲಿ ಆಡಿಸಿತ್ತು. ಕ್ರಿಕೆಟ್‌ನಲ್ಲಿ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಬಹಳ ಅಪರೂಪ. ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅವರು ತಮ್ಮ ಆಯ್ಕೆಯನ್ನು ಸರಿ ಎಂಬಂತೆ ನಿರೂಪಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿಂದ ರೋಹಿತ್ ಶರ್ಮಾ – ವೀಡಿಯೋ ವೈರಲ್
4 ಮಂದಿ ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಟೇಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಶಿವಂ ದುಬೆ ಅವರನ್ನು ಆಯ್ಕೆ ಮಾಡಲಾಗಿತ್ತು. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಆಲ್‌ರೌಂಡರ್‌ಗಳಾಗಿ 11ರ ಒಳಗಡೆ ಸ್ಥಾನ ಪಡೆದಿದ್ದರು. ಶಿವಂ ದುಬೆಗೆ ಹೆಚ್ಚಿನ ಬೌಲಿಂಗ್ ಅವಕಾಶ ನೀಡದೇ ಇದ್ದರೂ ಅವರೊಬ್ಬ ಮಧ್ಯಮ ವೇಗಿ ಬೌಲರ್ ಆಗಿದ್ದಾರೆ.
ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದಕ್ಕೆ ಮಾಧ್ಯಮಗಳು ರೋಹಿತ್ ಶರ್ಮಾ ಅವರ ಬಳಿ ಪ್ರಶ್ನೆ ಕೇಳಿದ್ದವು. ಇದಕ್ಕೆ ರೋಹಿತ್, ಈ ವಿಚಾರದ ಬಗ್ಗೆ ನಾನು ಹೆಚ್ಚಿನ ವಿವರ ನೀಡಲು ಬಯಸುವುದಿಲ್ಲ. ನಮ್ಮ ವಿರುದ್ಧ ತಂಡದ ನಾಯಕರು ಇದನ್ನು ಕೇಳುತ್ತಾರೆ ಅಂತ ಅಂದುಕೊಂಡಿದ್ದೇನೆ. ನಾವು ಕೆರೆಬಿಯನ್ ನಾಡಿನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಪರಿಸ್ಥಿತಿ ಹೇಗಿವೆ ಅನ್ನುವುದು ನಮಗೆ ತಿಳಿದಿವೆ. ಪಂದ್ಯ ಬೆಳಗ್ಗೆ 10, 10:30ಕ್ಕೆ ಆರಂಭವಾಗುವ ಕಾರಣ ಇದರಲ್ಲಿ ಸ್ವಲ್ಪ ತಾಂತ್ರಿಕ ಅಂಶ ಅಡಗಿದೆ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.