World Cup 2023: ಹಿಟ್‌ಮ್ಯಾನ್‌ ಸಿಕ್ಸರ್‌ ಹೊಡೆತಕ್ಕೆ ಲೆಜೆಂಡ್‌ ABD ದಾಖಲೆ ಪುಡಿಪುಡಿ

Public TV
2 Min Read
ABD vs ROHIT

ಬೆಂಗಳೂರು: ಟೀಂ ಇಂಡಿಯಾ (Team India) ಬ್ಯಾಟರ್‌ಗಳ ಅಬ್ಬರಕ್ಕೆ ವಿಶ್ವದಾಖಲೆಗಳು ನುಚ್ಚುನೂರಾಗುತ್ತಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI) ಭಾರತದ ಪರ 300ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದ ರೋಹಿತ್ ಶರ್ಮಾ (Rohit Sharma) ಇದೀಗ ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಸಿಡಿಸಿದ್ದಾರೆ.

ಭಾನುವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಿತು. ಆರಂಭದಿಂದಲೇ ಸಿಕ್ಸರ್‌, ಬೌಂಡರಿ ಅಬ್ಬರಿಸಿದ ರೋಹಿತ್‌ ಶರ್ಮಾ 54 ಎಸೆತಗಳಲ್ಲಿ 61 ರನ್ ಬಾರಿಸಿದರು. ಈ ವೇಳೆ 8 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದರು. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ನಂ.1 ಬ್ಯಾಟರ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಇದನ್ನೂ ಓದಿ: World Cup 2023: ಮೈಲಿಗಲ್ಲು ಸ್ಥಾಪಿಸಲು RO-KO ವೇಯ್ಟಿಂಗ್‌ – ಸೂಪರ್‌ ಸಂಡೇ ಡಬಲ್‌ ಧಮಾಕ..!

2015ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ (AB de Villiers) 58 ಸಿಕ್ಸರ್‌ ಹಾಗೂ 2019ರ ವರ್ಷದಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್‌ ಗೇಲ್ 56 ಸಿಕ್ಸರ್ ಸಿಡಿಸಿ ಒಂದು ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ್ದ ದಾಖಲೆ ಬರೆದಿದ್ದರು. 2023ರಲ್ಲಿ ರೋಹಿತ್ ಶರ್ಮಾ 59 ಸಿಕ್ಸರ್ ಸಿಡಿಸಿ ಇಬ್ಬರು ದಿಗ್ಗಜರ ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ. ಒಟ್ಟು ಈ ವರ್ಷದಲ್ಲಿ ರೋಹಿತ್‌ ಈವರೆಗೆ 60 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್‌ ಅಂತರದಲ್ಲಿ ಗೆದ್ದರೆ ಸೆಮಿಸ್‌ ತಲುಪಬಹುದು?

ಸೂಪರ್‌ ಸಂಡೇ ಮ್ಯಾಚ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಸ್ಫೋಟಕ ಆರಂಭ ಪಡೆಯಿತು. ಆರಂಭದಲ್ಲೇ ಡಚ್ಚರನ್ನು ಬೆಂಡೆತ್ತಲು ಶುರು ಮಾಡಿದ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 71 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟ ನೀಡಿತು. ಶುಭಮನ್‌ ಗಿಲ್‌ 32 ಎಸೆತಗಳಲ್ಲಿ 51 ರನ್‌ (4 ಸಿಕ್ಸರ್‌, 3 ಬೌಂಡರಿ) ಗಳಿಸಿದ್ರೆ, ರೋಹಿತ್‌ ಶರ್ಮಾ ಒಟ್ಟು 54 ಎಸೆತಗಳಲ್ಲಿ 61 ರನ್‌ (2 ಸಿಕ್ಸರ್‌, 8 ಬೌಂಡರಿ) ಚಚ್ಚಿ ಔಟಾದರು. ಇದನ್ನೂ ಓದಿ: ವಿಶ್ವಕಪ್‌ ಪವರ್‌ ಪ್ಲೇನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ರೋಹಿತ್‌ ಶರ್ಮಾ

14,000 ರನ್‌ ಕಂಪ್ಲೀಟ್‌: ನದರ್ಲೆಂಡ್ಸ್‌ ವಿರುದ್ಧ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ರೋಹಿತ್‌ ಶರ್ಮಾ ಆರಂಭಿಕನಾಗಿಯೇ 14 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

Share This Article