ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ನವೆಂಬರ್ 7ರಂದು ಟಾಸ್ ಮಾಡಲು ರಾಜ್‌ಕೋಟ್ ಅಂಗಳಕ್ಕೆ ಇಳಿಯುತ್ತಿದ್ದಂತೆ ಭಾರತದ ಪರ ದಾಖಲೆ ಬರೆಯಲಿದ್ದಾರೆ. ನಾಳೆ ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ವೃತ್ತಿ ಜೀವನದ 100ನೇ ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ರೋಹಿತ್ ಶರ್ಮಾ ಆಡಲಿದ್ದಾರೆ. ಈ ಮೂಲಕ 100 ಟಿ20 ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಸದ್ಯ ರೋಹಿತ್ ಶರ್ಮಾ ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯ ಆಡಿದ ಪಟ್ಟಿಯಲ್ಲಿ ಜಂಟಿ ಸ್ಥಾನವನ್ನು ಪಡೆದಿದ್ದು, ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ಮೊದಲ ಸ್ಥಾನದಲ್ಲಿದ್ದಾರೆ.
Advertisement
Advertisement
ಶೋಯೆಬ್ ಮಲಿಕ್ ಇಲ್ಲಿವರೆಗೂ 111 ಪಂದ್ಯಗಳನ್ನು ಆಡಿದ್ದು, ಮಲಿಕ್ ನಂತರದ ಸ್ಥಾನದಲ್ಲಿ 99 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ಶಾಹಿದ್ ಆಫ್ರಿದಿ ಇದ್ದಾರೆ. ನಾಳೆಯ ಪಂದ್ಯ ಆಡುವ ಮೂಲಕ ಆಫ್ರಿದಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಏರಲಿದ್ದಾರೆ. 98 ಅಂತರಾಷ್ಟ್ರೀಯ ಟಿ20 ಪಂದ್ಯವಾಡಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.
Advertisement
ಯಾರು ಎಷ್ಟು ಪಂದ್ಯವಾಡಿದ್ದಾರೆ?
ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯವಾಡಿದ ಭಾರತೀಯ ಕ್ರಿಕೆಟರಲ್ಲಿ ರೋಹಿತ್ ಶರ್ಮಾ ಮೊದಲಿಗರಾಗಿದ್ದಾರೆ. ಉಳಿದಂತೆ ಧೋನಿ (98), ಸುರೇಶ್ ರೈನಾ (78), ವಿರಾಟ್ ಕೊಹ್ಲಿ (72), ಯುವರಾಜ್ ಸಿಂಗ್ (57), ಶಿಖರ್ ಧವನ್ (56) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
Advertisement
ಹಿಟ್ ರೆಕಾರ್ಡ್:
99 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 2,452 ರನ್‌ಗಳನ್ನು ಗಳಿಸಿ, ಅತ್ಯಧಿಕ ರನ್ ಹೊಂದಿರುವ ಮೊದಲ ಆಟಗಾರರಾಗಿದ್ದಾರೆ. 72 ಪಂದ್ಯಗಳಲ್ಲಿ 2450 ರನ್ ಪೇರಿಸಿರುವ ನಾಯಕ ವಿರಾಟ್ ಕೊಹ್ಲಿ ಹಿಟ್ ಮ್ಯಾನ್ ಬೆನ್ನ ಹಿಂದೆಯೇ ಇದ್ದಾರೆ. ದೆಹಲಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದರು. 106 ಸಿಕ್ಸರ್ ಮೂಲಕ ಅತಿ ಹೆಚ್ಚು ಸಿಕ್ಸ್ ಹೊಡೆದ ಆಟಗಾರರಾಗಿದ್ದಾರೆ. ನಾಲ್ಕು ಶತಕದ ಮೂಲಕ ಅಧಿಕ ಸೆಂಚುರಿ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ.