ಬ್ರಿಡ್ಜ್‌ಟೌನ್: ಟಿ20 ವಿಶ್ವಕಪ್ (T20 World Cup 2024) ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ವಿಜಯೋತ್ಸವವನ್ನು ಎಲ್ಲೆಡೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಭಾರತೀಯರಿಗೆ ಅದೊಂದು ಭಾವುಕ ಕ್ಷಣವಾಗಿತ್ತು. ಭಾರತಕ್ಕೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿನ್ನುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೃತಜ್ಞತೆ ಸಲ್ಲಿಸಿದರು.
ಐಸಿಸಿ ಹಂಚಿಕೊಂಡಿರುವ ವೀಡಿಯೋದಲ್ಲಿ, ರೋಹಿತ್ ಶರ್ಮಾ (Rohit Sharma) ಅವರು ಮ್ಯಾಚ್ ಗೆದ್ದ ಬೆನ್ನಲ್ಲೇ ಬಾರ್ಬಡೋಸ್ ಪಿಚ್‌ನಿಂದ ಮಣ್ಣನ್ನು ಎತ್ತಿಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದಾರೆ. ಐತಿಹಾಸಿಕ ಟ್ರೋಫಿಗೆ ಮುತ್ತಿಟ್ಟಿದ್ದು ಹಿಟ್‌ಮ್ಯಾನ್‌ಗೂ ಕೂಡ ಭಾವುಕ ಕ್ಷಣವಾಗಿತ್ತು. ಇದನ್ನೂ ಓದಿ: T20 World Cup 2024: ಪತ್ನಿಗೆ ವೀಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ- ಫೋಟೋ ವೈರಲ್
Advertisement
View this post on Instagram
Advertisement
ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ರೋಹಿತ್ ಖುಷಿ ಹಂಚಿಕೊಂಡಿದ್ದರು. ಟ್ರೋಫಿಯನ್ನು ಅಪ್ಪಿಕೊಂಡು ಸಾರ್ಥಕತೆ ಮೆರೆದಿದ್ದರು. ಪತ್ನಿಯನ್ನು ಅಪ್ಪಿ ರೋಹಿತ್ ಆನಂದಭಾಷ್ಪ ಸುರಿಸಿದರು.
Advertisement
ವಿಶ್ವಕಪ್ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ಗೆ ಭಾವುಕ ವಿದಾಯ ಹೇಳಿದರು. ನಾನು ಟಿ20 ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಅದನ್ನು ಆನಂದಿಸಿದ್ದೇನೆ. ಈ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ಕಪ್ ಗೆಲ್ಲುವ ಬಯಕೆಯಿತ್ತು. ಅದನ್ನು ಮಾಡಿದ್ದೇನೆ ಎಂದು ರೋಹಿತ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಟಿ20 ವಿಶ್ವಕಪ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಜಯ್ ಶಾ – ವೀಡಿಯೋ ವೈರಲ್
Advertisement
ನನ್ನ ತಂಡದಲ್ಲಿ ಈ ರೀತಿಯ ಆಟಗಾರರನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನನಗಾಗಿ ಮತ್ತು ಟೀಮ್ ಇಂಡಿಯಾಕ್ಕಾಗಿ ಆಡುತ್ತಿರುವ ಆಟಗಾರರಿಗೆ ನಿಜವಾಗಿಯೂ ಕೃತಜ್ಞರಾಗಿರಬೇಕು ಎಂದು ಮೆಚ್ಚಿ ನುಡಿದಿದ್ದಾರೆ.