ದುಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‍ನಲ್ಲಿ 400 ಸಿಕ್ಸರ್ ಹೊಡೆದ ಭಾರತದ ಮೊದಲ ಬ್ಯಾಟ್ಸ್‌ಮ್ಯಾನ್‌ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
Advertisement
ಐಪಿಎಲ್ ಸಹಿತ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಒಟ್ಟು 355 ಟಿ20 ಪಂದ್ಯಗಳಿಂದ 400 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ 400 ಸಿಕ್ಸ್ ಬಾರಿಸಿದ ಮೊದಲ ಭಾರತದ ಆಟಗಾರನಾಗಿ ಶರ್ಮಾ ಹೊರ ಹೊಮ್ಮಿದ್ದಾರೆ. ಉಳಿದಂತೆ ಚೆನ್ನೈ ತಂಡದ ಆಟಗಾರ ಸುರೇಶ್ ರೈನಾ 325 ಸಿಕ್ಸ್ ಸಿಡಿಸಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರರ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ 320 ಸಿಕ್ಸರ್ ಗಳೊಂದಿಗೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 304 ಸಿಕ್ಸ್ ಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ
Advertisement
Advertisement
ರೋಹಿತ್ ಶರ್ಮಾ 400 ಸಿಕ್ಸ್ ಗಳ ಪೈಕಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 133 ಸಿಕ್ಸ್ ಸಿಡಿಸಿದರೆ, 227 ಸಿಕ್ಸ್ ಐಪಿಎಲ್, 16 ಸಿಕ್ಸ್ ಚಾಂಪಿಯನ್ಸ್ ಲೀಗ್ ಮತ್ತು 24 ಸಿಕ್ಸ್ ಇತರ ಟಿ20 ಪಂದ್ಯದಲ್ಲಿ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್
Advertisement
ವಿಶ್ವ ಟಿ20 ಕ್ರಿಕೆಟ್‍ನಲ್ಲಿ ಗಮನಿಸಿದರೆ ಅತೀ ಹೆಚ್ಚು ಸಿಕ್ಸರ್ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ 1024 ಸಿಕ್ಸ್ ಗಳೊಂದಿಗೆ ಮೊದಲಿಗರಾಗಿ ಕಾಣಿಸಿಕೊಂಡರೆ, ವೆಸ್ಟ್ ಇಂಡೀಸ್ ತಂಡದ ಕೀರಾನ್ ಪೋಲಾರ್ಡ್ 758 ಸಿಕ್ಸ್ ಮತ್ತು ಆಂಡ್ರೆ ರಸೆಲ್ 510 ಸಿಕ್ಸ್ ಚಚ್ಚಿ ಸಿಕ್ಸರ್ ವೀರರಾಗಿ ಗುರುತಿಸಿಕೊಂಡಿದ್ದಾರೆ.