`ಹಿಟ್‍ಮ್ಯಾನ್’ ಶರ್ಮಾ ಕಮ್‍ಬ್ಯಾಕ್, ಅಶ್ವಿನ್ ಏಕೈಕ ಸ್ಪಿನ್ನರ್

Public TV
1 Min Read
ind vs aus

– ಆಸೀಸ್ ಆಗ್ನಿ ಪರೀಕ್ಷೆಗೆ ಟೀಂ ಇಂಡಿಯಾ ಸಿದ್ಧ

ಆಡಿಲೇಡ್: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದು, ಆಡುವ 12 ಆಟಗಾರರನ್ನು ಬಿಸಿಸಿಐ ಘೋಷಣೆ ಮಾಡಿದೆ.

ಬಹುನಿರೀಕ್ಷಿತ ಟೆಸ್ಟ್ ಸರಣಿಯಾಗಿ ನಿರೀಕ್ಷೆ ಮೂಡಿಸಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಈ ಹಿಂದಿಗಿಂತಲೂ ಹೆಚ್ಚಿನ ಗೆಲ್ಲುವ ಅವಕಾಶಗಳನ್ನು ಪಡೆದುಕೊಂಡಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸರಣಿಯಲ್ಲಿ ಕೊಹ್ಲಿ ಟೀಂ ಇಂಡಿಯಾ ಪರ ಕೀ ಪ್ಲೇಯರ್ ಆಗಿದ್ದು, ಆಡುವ 12ರ ಬಳಗದಲ್ಲಿ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಯುವ ಆಟಗಾರ ಹನುಮ ವಿಹಾರಿ, ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ ಅವರನ್ನು ಒಳಗೊಂಡ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಲಾಗಿದೆ.

ತಂಡದ ವೇಗದ ಬೌಲಿಂಗ್ ಜವಾಬ್ದಾರಿಯನ್ನು ಇಶಾಂತ್ ಶರ್ಮಾ ವಹಿಸಿದ್ದು, ಜಸ್‍ಪ್ರೀತ್ ಬುಮ್ರಾ, ಮಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ. ತಂಡದ ವೇಗದ ಬೌಲಿಂಗ್‍ಗೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಸಾಥ್ ನೀಡಲಿದ್ದಾರೆ. ಇದರೊಂದಿಗೆ ಉಮೇಶ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರದಿಂದ ಆಡಿಲೇಡ್‍ನ ಓವೆಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಕಳೆದ ಬಾರಿ ಆಸೀಸ್ ನೆಲದಲ್ಲಿ 2-0 ಅಂತರದಲ್ಲಿ ಸರಣಿ ಸೋತಿದ್ದ ಟೀಂ ಇಂಡಿಯಾ ಉತ್ತಮ ಪೈಪೋಟಿ ನೀಡಿತ್ತು. ಆದರೆ ಈ ಬಾರಿ ತಂಡಕ್ಕೆ ಗೆಲ್ಲುವ ಅವಕಾಶಗಳು ಹೆಚ್ಚಿದ್ದು, ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೇಲೆ ಭಾರೀ ನಿರೀಕ್ಷೆಗಳನ್ನು ಅಭಿಮಾನಿಗಳು ಹೊಂದಿದ್ದಾರೆ.

ಆಸೀಸ್ ತಂಡದ ಆಟಗಾರರು ಚೆಂಡು ವಿರೂಪಗೊಳಿಸದ ಪ್ರಕರಣದ ಬಳಿಕ ತಮ್ಮ ಸಾಕಷ್ಟು ವಿಚಲಿತರಾಗಿದ್ದು, ಪ್ರಕರಣದಿಂದ ಹೊರಬಂದು ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿದೆ. ಆದರೆ ತಂಡಕ್ಕೆ ಸ್ಮಿತ್ ಹಾಗೂ ವಾರ್ನರ್ ಅಲಭ್ಯತೆ ಭಾರೀ ಹೊಡೆತ ನೀಡಿರುವುದನ್ನು ಪಾಕಿಸ್ತಾನ ವಿರುದ್ಧ ಮುಕ್ತಾಯವಾದ ಸರಣಿಯಲ್ಲಿ ಕಾಣಬಹುದಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *