ಬೆಂಗಳೂರು: ರಾಜ್ಯದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಎಲ್ಲಾ ಸ್ಟಾರ್ ನಟ-ನಟಿಯರು, ಸೆಲೆಬ್ರೆಟಿಗಳು ಕೂಡ ಕನ್ನಡಿಗರಿಗೆ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವಕ್ಕೆ ವಿಶ್ ಮಾಡಿದ್ದಾರೆ.
ಯಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ “ಅಣ್ತಮ್ಮಾ.. ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡಬೇಕು. ಗಡಿಗಳನ್ನ ಮೀರಿ ಗರಿಗೆದರಬೇಕು. ಸಾಗರದಾಚೆಗೂ ಚಾಚಿ ನಿಲ್ಲಬೇಕು. ಕನ್ನಡ ಅಂದರೆ ಮೈ ರೋಮ ಎದ್ದೇಳಬೇಕು. ಕನ್ನಡಿಗರು ಅಂದರೆ ಎದೆ ಉಬ್ಬಿಸಿ ನಿಲ್ಲಬೇಕು. ಕನ್ನಡ ಉಳಿಸಿ ಬೆಳಸಿ ಅಂತ ಬೇಡಿಕೊಳ್ಳುವ ಕಾಲ ಹೋಯಿತು. ಈಗೇನಿದ್ದರೂ ಕನ್ನಡ ಕಲಿತು, ಕಲಿಸಿ, ಬಳಸಿ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ‘ಒಡೆಯ’ನ ಗಿಫ್ಟ್- ಟೀಸರ್ ರಿಲೀಸ್
ರಾಕಿಂಗ್ ಸ್ಟಾರ್ ಶುಭಕೋರಿದ ಒಂದು ಗಂಟೆಯಲ್ಲಿ 14 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, 2,800ಕ್ಕೂ ಹೆಚ್ಚು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಮೂಲಕ ನೆಚ್ಚಿನ ನಾಯಕನಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತಿದ್ದಾರೆ. ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಯಾಕೆಂದರೆ ಎರಡು ದಿನಗಳ ಹಿಂದೆ ರಾಧಿಕಾ ಪಂಡಿತ್ ಅವರು ಜೂನಿಯರ್ ಯಶ್‍ಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ತಮ್ಮನಿಗೆ ಐರಾ ವಿಶ್- ರಾಕಿಭಾಯ್ ಫುಲ್ ಖುಷ್