Connect with us

Bengaluru City

ತಮ್ಮನಿಗೆ ಐರಾ ವಿಶ್- ರಾಕಿಭಾಯ್ ಫುಲ್ ಖುಷ್

Published

on

– ಮಕ್ಕಳೊಂದಿಗೆ ಫುಲ್ ಬ್ಯುಸಿ ಎಂದ ಯಶ್

ಬೆಂಗಳೂರು: ತಮ್ಮನಿಗೆ ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾಳೆ. ಇದೇ ವೇಳೆ ಯಶ್, ನಾನು ಮಕ್ಕಳೊಂದಿಗೆ ಫುಲ್ ಬ್ಯುಸಿಯಾಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಕುರಿತು ಯಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಎರಡನೇ ಬಾರಿ ತಂದೆಯಾಗುತ್ತಿರುವ ಸುದ್ದಿಯನ್ನು ಯಶ್ ಪುತ್ರಿ ಐರಾಳ ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ತಮ್ಮನ ಕರೆಗೆ ಅಕ್ಕ ಐರಾ ಪ್ರತಿಕ್ರಿಯಿಸುವಂತೆ ವಿಡಿಯೋವೊಂದನ್ನು ಯಶ್  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿಗಳ ಖುಷಿ ಹಂಚಿಕೊಂಡ ಯಶ್, ಐರಾಗೆ ಇಂದು ತಮ್ಮ ಬಂದಿದ್ದಾನೆ. ನಮ್ಮ ಸಂತಸ ಇಮ್ಮಡಿಯಾಗಿದೆ. ಮಕ್ಕಳಿಬ್ಬರ ಮಾತುಕತೆಯನ್ನು ಕೇಳಲು ಕಾಯುತ್ತಿದ್ದೇನೆ. ನಿಮ್ಮ ಈ ಪ್ರೀತಿ, ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ ಎಂದು ತಿಳಿಸಿದ್ದಾರೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕೇವಲ ಎರಡು ಗಂಟೆಯಲ್ಲಿ 2.5 ಲಕ್ಷಕ್ಕೂ ಅಧಿಕ ನೆಟ್ಟಿಗರು ನೋಡಿದ್ದಾರೆ. ಈ ಮೂಲಕ ಬೆಳಗ್ಗೆಯಿಂದ ಜೂನಿಯರ್ ರಾಕಿಭಾಯ್‍ಯನ್ನು ಹಾರೈಸಿದ ಅಭಿಮಾನಿಗಳಿಗೆ ಯಶ್ ಧನ್ಯವಾದ ತಿಳಿಸಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯೆ ಸ್ವರ್ಣಾ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು 3 ಕೆ.ಜಿ ತೂಕವಿದೆ. ಮಗು ಐರಾಳಂತೆಯೇ ಕಾಣುತ್ತಾನೆ. ಹಾಗೆಯೇ ರಾಧಿಕಾ ಅವರ ಮೊದಲ ಹೆರಿಗೆ ಸಿಸೇರಿಯನ್ ಮಾಡಲಾಗಿತ್ತು. ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್ ಎಂದು ತಿಳಿಸಿದ್ದರು.

ಮಗನನ್ನ ನೋಡಿ ಯಶ್ ಫುಲ್ ಖುಷಿಯಾಗಿದ್ದಾರೆ. ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಆಸ್ಪತ್ರೆಗೆ ಬಂದಿದ್ದಾರೆ. ಇನ್ನು ಮೂರು ದಿನಗಳಲ್ಲಿ ರಾಧಿಕಾ ಹಾಗೂ ಮಗುವನ್ನು ಡಿಸ್ಚಾರ್ಜ್ ಮಾಡಲಾಗುತ್ತೆ. ಬಹುಶಃ ಅದೇ ದಿನ ಯಶ್-ರಾಧಿಕಾ ಸುದ್ದಿಗೋಷ್ಠಿ ಮುಖಾಂತರ ಅಭಿಮಾನಿಗಳಿಗೆ ಮಗನ ದರ್ಶನ ಮಾಡಿಸಲಿದ್ದಾರೆ ಎಂದು ಹೇಳಿದ್ದರು.

ರಾಧಿಕಾ ಪಂಡಿತ್ ಇಂದು ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರ ತಿಳಿದು ಯಶ್, ರಾಧಿಕಾ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಮೊಮ್ಮಗನ ಆಗಮನ ಖುಷಿಯನ್ನು ಯಶ್ ತಾಯಿ ಪುಷ್ಪ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು.