ರಾಕಿಂಗ್ ಸ್ಟಾರ್ ಯಶ್ (Yash) ಹೊಸ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ಕೊಡದೇ ಇದ್ದರೂ, ಯಶ್ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಯಶ್ ಈಗಾಗಲೇ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಿನಿಮಾದ ನಿರ್ದೇಶಕಿ ಗೀತಾ ಬೆಂಗಳೂರಿನಲ್ಲೇ ಬೀಡುಬಿಟ್ಟಿರುವುದರಿಂದ ಸತತವಾಗಿ ಹೊಸ ಚಿತ್ರದ ಕೆಲಸದಲ್ಲಿ ತೊಡಗಿದ್ದಾರಂತೆ.
ಒಂದು ಕಡೆ ಹೊಸ ಸಿನಿಮಾದ (New Movie) ಬಗ್ಗೆ ಅಪ್ ಡೇಟ್ ಕೊಡಿ ಎಂದು ಯಶ್ ಫ್ಯಾನ್ಸ್ ದುಂಬಾಲು ಬಿದ್ದಿದ್ದರೆ ಮತ್ತೊಂದು ಕಡೆ ಅವರ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯೊಂದು ಬಂದಿದೆ. ರಜನಿಕಾಂತ್ ನಟನೆಯ 171ನೇ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ರಜನಿಕಾಂತ್ (Rajinikanth) ಅವರಷ್ಟೇ ಮಗನ ಪಾತ್ರವೂ ಇದೆಯಂತೆ. ಹಾಗಾಗಿ ರಜನಿಯ ಮಗನಾಗಿ ಯಶ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಸ್ನೇಹಾ ಆಚಾರ್ಯ
ರಜನಿಕಾಂತ್ ಜೊತೆ ಈಗಾಗಲೇ ಜೈಲರ್ (Jailer) ಸಿನಿಮಾದಲ್ಲಿ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ (Shivaraj Kumar) ನಟಿಸಿದ್ದಾರೆ. ರಜನಿ ಅವರ ಅಭಿಮಾನಿಯಾಗಿ ಅವಕಾಶವನ್ನು ಬಿಡಲು ಮನಸಾಗಲಿಲ್ಲ ಎಂದು ಈ ಹಿಂದೆಯೇ ಶಿವಣ್ಣ ಹೇಳಿಕೊಂಡಿದ್ದರು. ಯಶ್ ಕೂಡ ತಾವು ರಜನಿಯ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಹಾಗಾಗಿ ಬಂದಿರುವ ಅವಕಾಶವನ್ನು ರಾಕಿಭಾಯ್ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ.
ರಜನಿ ಸದ್ಯ ಜೈಲರ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಪುತ್ರಿ ಐಶ್ವರ್ಯ ನಿರ್ದೇಶನದ ಲಾಲ್ ಸಲಾಮ್ ಚಿತ್ರದಲ್ಲೂ ರಜನಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ರಜನಿಯ 170ನೇ ಸಿನಿಮಾ ಸೆಟ್ಟೇರಲಿದೆ. ಇದು ಮುಗಿದ ನಂತರವೇ 171ನೇ ಸಿನಿಮಾ ಶುರುವಾಗಲಿದೆ. ಈ ಸಿನಿಮಾವನ್ನು ಕನಗರಾಜ್ (Kanagaraj) ನಿರ್ದೇಶನ ಮಾಡಲಿದ್ದಾರೆ.