ಬೆಂಗಳೂರು: ನಾವು ಜೀವನ ಮಾಡುವ ಸುತ್ತಮುತ್ತ ಉತ್ತಮ ಪರಿಸರ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಂದೇಶ ಸಾರಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಪ್ರೋ-ಕಬ್ಬಡ್ಡಿ ಜಾಹೀರಾತನ್ನು ಹೊರತುಪಡಿಸಿ ಈವರೆಗೆ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯ ರಾಯಭಾರಿ ಆಗುವ ಮೂಲಕ ಮೊಟ್ಟ ಮೊದಲ ಜಾಹೀರಾತಿನಲ್ಲಿ ಅಭಿನಯಿಸಲಿದ್ದು, ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಿಸಿಬಿಯ ರಾಯಭಾರಿ ಆಗಿ ಆಯ್ಕೆ ಮಾಡಲಾಗಿದೆ.
Advertisement
ಈ ಹಿಂದೆ ಕಿಚ್ಚ ಸುದೀಪ್ ಸಿಸಿಬಿಯ ರಾಯಭಾರಿ ಆಗಿದ್ದರು. ಕಿಚ್ಚನ ನಂತರ ರಾಕಿಂಗ್ ಸ್ಟಾರ್ ಸಿಸಿಬಿಯ ರಾಯಭಾರಿ ಆಗಿದ್ದಾರೆ. ಸರ್ಕಾರದ ಸಾಕಷ್ಟು ಜಾಹೀರಾತುಗಳಲ್ಲಿ ಸಿನಿಮಾ ಹಾಗೂ ಕ್ರೀಡೆಯ ಗಣ್ಯರು ಭಾಗಿಯಾಗಿದ್ದಾರೆ.
Advertisement
ಯುವ ಮನಸ್ಸುಗಳನ್ನು ಸೆಳೆಯಲು “ಬ್ರಾಂಡ್ ಅಂಬಾಸಿಡರ್’ ಬಳಕೆಗೆ ಮುಂದಾಗಿರುವ ಪೊಲೀಸ್ ಇಲಾಖೆ ಮಾದಕ ವಸ್ತು ಸೇವನೆ, ರೌಡಿ ಚಟುವಟಿಕೆಗಳು ಹಾಗೂ ಕಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳಿಂದ ಮುಕ್ತರಾಗುವಂತೆ ಸಂದೇಶ ಸಾರುವ ಜಾಹೀರಾತುಗಳಲ್ಲಿ ಯಶ್ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಶತಾಯುಷಿ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿದ ಯಶ್
Advertisement
Advertisement
ಯಸ್ ಮೊದಲ ಬಾರಿಗೆ ಗೂಗ್ಲಿ ಸಿನಿಮಾದಲ್ಲಿ ಖಾಕಿ ತೊಟ್ಟು ಪೋಸ್ ಕೊಟ್ಟಿದ್ದರು. ಈ ಬಾರಿ ಸಿಸಿಬಿಯ ರಾಯಭಾರಿಯಾಗಿ ಅಪರಾಧಿಗಳಿಗೆ ಪಾಠ ಹೇಳಲು ನಿರ್ಧರಿಸಿದ್ದಾರೆ. ಸಾಕಷ್ಟು ವಿಚಾರಗಳಲ್ಲಿ ಅನೇಕರಿಗೆ ಮಾದರಿ ಆಗಿರುವ ಯಶ್ ಮತ್ತೊಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ.