Bengaluru CityCinemaDistrictsKarnatakaLatestLeading NewsMain PostSandalwood

ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

– ಪಾನಿಪುರಿ ಕಿಟ್ಟಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ ರಾಕಿಂಗ್ ಸ್ಟಾರ್
– ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಲಿದ್ದಾರೆ

ಬೆಂಗಳೂರು: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.

ಯಶ್ ಸಿನಿಜರ್ನಿಯ ಆರಂಭದಿಂದ ಜೊತೆ ಇರೋ ಸ್ನೇಹಿತ ಮತ್ತು ಜಿಮ್‍ಟ್ರೈನರ್ ಪಾನಿಪುರಿ ಅವರು ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ‘ರಿಚ್ಚಿ ಗ್ರಿಲ್ಸ್ ರೆಸ್ಟೋರೆಂಟ್’ ಪ್ರಾರಂಭಿಸಿದ್ದು, ಈ ಪ್ರಯತ್ನಕ್ಕೆ ಯಶ್ ಆಗಮಿಸಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಡಿ.31 ಬಂದ್ ಕುರಿತು ಮಾತನಾಡಿದರು. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

ಎಂಇಎಸ್ ಪುಂಡಾಟ ವಿಚಾರ ಕುರಿತು ಮಾತನಾಡಿದ ಅವರು, ಕನ್ನಡಿಗರಾಗಿ ಎಲ್ಲರ ಅಭಿಪ್ರಾಯ ಒಂದೇ ರೀತಿ ಇರುತ್ತೆ. ನೋವಾಗುತ್ತೆ, ಕೋಪ ಬರುತ್ತೆ. ಇನ್ನೊಂದು ಸಾಂಸ್ಕøತಿಗೆ ನೋವು ಮಾಡಬಾರದು. ಇಂತಹ ಘಟನೆ ನಡೆಯಬಾರದು. ತಪ್ಪು, ಇದು ಖಂಡನೀಯ. ನಮ್ಮ ವೃತ್ತಿಯಲ್ಲಿ ನಾಡು, ನುಡಿ ರಕ್ಷಣೆ ಮಾಡುತ್ತೇವೆ. ಬಂದ್ ವಿಚಾರವಾಗಿ ದೊಡ್ಡವರು ಏನ್ ನಿರ್ಧಾರ ಮಾಡ್ತಾರೆ ಮಾಡಲಿ. ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಅನ್ನೋದು ನನ್ನ ಅಭಿಪ್ರಾಯ ಎಂದರು.

ಗೆಳೆಯನ ಬಗ್ಗೆ ಮಾತನಾಡಿದ ಅವರು, ನಮ್ಮ ಈ ಲುಕ್‍ಗೆಲ್ಲಾ ಪಾನಿಪುರಿ ಕಿಟ್ಟಿನೇ ಕಾರಣ. ಪಾನಿಪುರಿ ಬ್ಯುಸಿನೆಸ್ ನಿಂದ ಕಿಟ್ಟಿ ಅವರ ಕೆರಿಯರ್ ಶುರುವಾಗಿತ್ತು. ಇವತ್ತು ಸಾಧನೆ ಮಾಡಿ ಒಂದು ರೆಸ್ಟೋರೆಂಟ್ ಮಾಡಿದ್ದಾರೆ. ಕಿಟ್ಟಿ ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಯಲ್ಲಿದ್ದಾರೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಈ ವರ್ಷನೂ ಕೊರೊನಾದಿಂದ ಗ್ರ್ಯಾಂಡ್ ಬರ್ತ್ ಡೇ ಬೇಡ ಎಂದ ಯಶ್, ಕೆಜಿಎಫ್ 2 ಟ್ರೇಲರ್ ನನ್ನ ಹುಟ್ಟುಹಬ್ಬಕ್ಕೆ ಬರಲ್ಲ. ಇನ್ನೂ ತಡವಾಗಿ ಬರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ನಾಮಫಲಕದಲ್ಲಿ ಪುನೀತ್ ರಾಜ್‍ಕುಮಾರ್ ಹೆಸರು ಅಳಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

ಕಿಟ್ಟಿ ಅವರು ಸ್ಯಾಂಡಲ್‍ವುಡ್ ಹಲವು ಸೆಲೆಬ್ರೆಟಿಗಳಿಗೆ ಜಿಮ್ ಟ್ರೈನರ್ ಆಗಿದ್ದು, ಈ ಕಾರ್ಯಕ್ರಮಕ್ಕೆ ಅಜಯ್ ರಾವ್ ಹಾಗು ನೆನಪಿರಲಿ ಪ್ರೇಮ್ ಸಹ ಭಾಗವಹಿಸಿದ್ದರು.

Leave a Reply

Your email address will not be published.

Back to top button