ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟೂರಾದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನೂತನವಾಗಿ ತೋಟ ಮನೆ ಖರೀದಿಸಿದ್ದಾರೆ. ಈ ಮೂಲಕ ಈ ಸ್ಥಳದಲ್ಲಿ ಕೃಷಿ ಮಾಡಿ ರೈತರಿಗೆ ಅರೀವು ಮೂಡಿಸುವ ಹೊಸ ಸಾಹಸಕ್ಕೆ ರಾಕಿ ಬಾಯ್ ಕೈ ಹಾಕಿದ್ದಾರೆ.
ಜಿಲ್ಲೆಯ ವಿದ್ಯಾನಗರದಲ್ಲಿ ಯಶ್ ಮನೆ ಖರೀದಿಸಿದ್ದಾರೆ. ಹುಟ್ಟೂರಿನ ಮೇಲಿರುವ ಅಭಿಮಾನದಿಂದ ಜಿಲ್ಲೆಯಲ್ಲಿ ಯಶ್ ಆಸ್ತಿ ಖರೀದಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ತೋಟ ಮತ್ತು ಮನೆ ಖರೀದಿಸಿರುವ ಯಶ್ ತಮ್ಮ ತಾಯಿ ಅವರ ಹುಟ್ಟೂರು ಹಾಸನದ ದೊಡ್ಡಕೊಂಡಗೊಳ ಗ್ರಾಮದಲ್ಲಿ ಕೃಷಿ ಮಾಡಿ ರೈತರಿಗೆ ಅರಿವು ಮೂಡಿಸುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಮಗನ ಈ ಒಳ್ಳೆಯ ಕಾರ್ಯಕ್ಕೆ ಅವರ ತಂದೆ ತಾಯಿ ಕೂಡ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಕೃಷಿ ಕಾರ್ಯದಲ್ಲಿ ಯಶ್ ಪೋಷಕರು ತೊಡಗಿದ್ದಾರೆ. ಜನಪ್ರಿಯತೆ ಉತ್ತುಂಗದಲ್ಲಿ ಇದ್ದರೂ ಹುಟ್ಟೂರಿನ ಮಣ್ಣಿನ ಪ್ರೀತಿಗೆ ರಾಕಿ ಬಾಯ್ ಮನಸೋತಿದ್ದಾರೆ.
Advertisement
Advertisement
ವಿದ್ಯಾನಗರದ 68*70 ವಿಸ್ತೀರ್ಣದ ವಿಶಾಲ ಮನೆಯನ್ನು ಯಶ್ ಖರೀದಿಸಿದ್ದು, ಶನಿವಾರ ಹಾಗೂ ಭಾನುವಾರ ಇಲ್ಲೇ ತಾಯಿಯೊಂದಿಗೆ ಕಾಲ ಕಳೆದಿದ್ದಾರೆ. ಮನೆಗೆ ಯಾವ ಬಣ್ಣ ಮಾಡಿಸಬೇಕು ಹಾಗೂ ಏನೆಲ್ಲ ಮಾಡಬೇಕು ಎಂದು ಚರ್ಚೆ ಮಾಡಿ, ತೋಟದಲ್ಲಿ ಒಂದು ಸುತ್ತು ಹಾಕಿ ಬಳಿಕ ಪತ್ನಿಯ ತವರೂರು ಕಡೆಗೆ ರಾಕಿ ಬಾಯ್ ಹೋಗಿದ್ದಾರೆ.
Advertisement
ತಮ್ಮ ಕೆಲಸದ ಒತ್ತಡದಿಂದ ಹೊರಬಂದು ಬಿಡುವಿನ ವೇಳೆಯನ್ನು ಯಶ್ ತನ್ನೂರಲ್ಲೇ ಸಮಯ ಕಳೆಯಲು ಬಯಸಿದ್ದು, ಹುಟ್ಟೂರಿನ ಮೇಲೆ ಇರುವ ಅಭಿಮಾನವೇ ಯಶ್ ಅವರಿಗೆ ವಿದ್ಯಾನಗರದಲ್ಲೊಂದು ಸ್ವಂತಮನೆ ಖರೀದಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಕೃಷಿ ಕುಟುಂಬದಿಂದ ಬಂದ ಯಶ್ ಅಟ್ಟಾವರ ಬಳಿ 80 ಎಕರೆ ವಿಶಾಲವಾದ ಮಾವು, ಸಪೋಟ, ಗೋಡಂಬಿ ತೋಟವನ್ನು ಖರೀದಿಸಿದ್ದಾರೆ.
Advertisement
ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ಮಗ ಯಶ್‍ಗೆ ಹಾಸನ ಎಂದರೆ ವಿಶೇಷ ಅಭಿಮಾನವಿದೆ. ಕೆಲ ತಿಂಗಳ ಹಿಂದೆಯೇ ಮನೆ, ತೋಟ ಖರೀದಿಸಲು ಮುಂದಾಗಿದ್ದೇವು. ಈಗ ಖರೀದಿ ಪ್ರಕ್ರಿಯೆ ಮುಗಿಸಿದ್ದೇವೆ ಅಷ್ಟೇ ಯಶ್ ತಾಯಿ ಪುಷ್ಪಾ ಅವರು ತಿಳಿಸಿದ್ದಾರೆ.
ಯಶ್ ಹುಟ್ಟಿದ್ದು ಹಾಸನ ಜಿಲ್ಪಾಸ್ಪತ್ರೆಯಲ್ಲಿ. ಬೆಳೆದಿದ್ದು ಮೈಸೂರಿನಲ್ಲಿ. ಇರುವುದು ಬೆಂಗಳೂರಿನಲ್ಲಿ. ಮೈಸೂರಿನಲ್ಲೇ ಮನೆಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಹಾಸನದಲ್ಲಿ ಹುಟ್ಟಿದ ಹಿನ್ನೆಲೆಯಲ್ಲಿ ಇಲ್ಲೇ ಜಾಗ ಖರೀದಿಸಬೇಕೆಂದು ಯಶ್ ಕನಸು ಕಂಡಿದ್ದರು. ಆದರಂತೆ ಈಗ ಜಾಗ ಖರೀದಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv