ಹೊಸ ವರ್ಷಕ್ಕೆ ಭರ್ಜರಿಯಾಗಿ ರಿಲೀಸ್ ಆದ ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಸಾಂಗ್ ಟ್ರೆಂಡಿಂಗ್ನಲ್ಲಿದೆ. ಈ ಸಾಂಗ್ ಮೇಲೆ ಟ್ಯೂನ್ ಕದ್ದಿರೋ ಆರೋಪ ಮಾಡ್ತಿದ್ದಾರೆ ರ್ಯಾಪರ್ ವೈ ಬುಲ್ ಯುವರಾಜ್.
ಹೊಸ ವರ್ಷಕ್ಕೊಂದು ಕಿಕ್ಕೇರಿಸುವ ಸಾಂಗ್ ಕೊಡ್ತಾ ಬಂದಿರೋ ರ್ಯಾಪರ್ ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ ಮಾಡ್ತಿದ್ದಾರೆ ರ್ಯಾಪರ್ ವೈ ಬುಲ್ ಯುವರಾಜ್. ‘2025 ರ ಹೊಸ ವರ್ಷಕ್ಕೆ ರಿಲೀಸ್ ಆದ ಕಾಟನ್ ಕ್ಯಾಂಡಿ ಸಾಂಗ್ ಟ್ಯೂನ್ ನಾನು ಆರು ವರ್ಷದ ಹಿಂದೆ ಮಾಡಿದ ವೈ ಬುಲ್ ಪಾರ್ಟಿ ಸಾಂಗ್ ಟ್ಯೂನ್ ಒಂದೇ ಇದೆ. ಮೊದಲ ಪಲ್ಲವಿ, ಸೆಕೆಂಡ್ ಚರಣ ಕಾಪಿ ಮಾಡಿದ್ದಾರೆ ಚಂದನ್ ಶೆಟ್ಟಿ’ ಅಂತಾ ಆರೋಪ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ತುಂಬಾನೇ ಕಷ್ಟಪಟ್ಟು ಹಣ ಕೂಡಿಟ್ಟು ರ್ಯಾಪ್ ಸಾಂಗ್ ಮಾಡಿದ್ದೀನಿ ಅಂತಾ ‘ಪಬ್ಲಿಕ್ ಟಿವಿ’ ಜೊತೆ ವೈ ಬುಲ್ ಯುವರಾಜ್ ಮಾತನಾಡಿದ್ದಾರೆ.
Advertisement
ವೈ ಬುಲ್ ಯವರಾಜ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಆ ಟ್ಯೂನ್ ನಾನು ಮೊದಲೇ ಕೇಳಿದ್ರೆ, ನಾನು ಕಾಟನ್ ಕ್ಯಾಂಡಿ ಸಾಂಗ್ ಮಾಡ್ತಾನೇ ಇರ್ಲಿಲ್ಲ. ಈ ಸಾಂಗ್ ಕೇಳಿದಾಗ ಸೇಮ್ ಇದೆಯಲ್ಲ ಅಂತಾ ನಾನೇ ಶಾಕ್ ಆಗಿದ್ದೆ ಅಂತಾ ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ವೈ ಬುಲ್ ಪಾರ್ಟಿ ಸಾಂಗ್ನ ಟ್ಯೂನ್ ಕದ್ದ ಆರೋಪ ಚಂದನ್ ಶೆಟ್ಟಿ ಮೇಲೆ ಬಂದಿದೆ. ಚಂದನ್ ಶೆಟ್ಟಿ, ಪ್ಲಾಪ್ ಸಾಂಗ್ ಕದ್ದು ಮಾಡುವ ಅವಶ್ಯಕತೆ ನನಗಿಲ್ಲ ಅಂತಾ ಈ ಆರೋಪವನ್ನ ತಳ್ಳಿ ಹಾಕಿದ್ದಾರೆ. ಆದ್ರೆ ಕಾಟನ್ ಕ್ಯಾಂಡಿ ಮಾಡುವಾಗ ಟ್ಯೂನ್ ಕೇಳಿದ್ರೆ ನಾನು ಸಂತೋಷದಿಂದ ಬಿಟ್ಟುಕೊಡ್ತಿದ್ದೆ. ಈಗ್ಲೂ ಕೂಡಾ ಇಷ್ಟೆಲ್ಲ ನಡಿತಿದ್ರು ಚಂದನ್ ಶೆಟ್ಟಿ ಅವ್ರು ಒಂದು ಫೋನ್ ಮಾಡಿಯೂ ಮಾತಾಡಿಲ್ಲ. ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಹೋರಾಟ ಮಾಡ್ತೀನಿ ಎಂದಿದ್ದಾರೆ ವೈ ಬುಲ್ ಯುವರಾಜ್. ಈ ಇಬ್ಬರ ರ್ಯಾಪರ್ ವಾರ್ ಮುಂದೆಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.