ಮೈಸೂರು: ನಗರದ ಸಿದ್ದಾರ್ಥ ಹೋಟೆಲ್ ಊಟ-ತಿಂಡಿ ಗ್ರಾಹಕರಿಗೆ ನೀಡಲು ಸಪ್ಲೇಯರ್ಸ್ ಬದಲು ಹೊಸ ಲೇಡಿ ರೋಬೋದ ಮೊರೆ ಹೋಗಿದೆ.
Advertisement
ಇಷ್ಟು ದಿನ ಅರ್ಡರ್ ಮಾಡಿದರೆ ಅದನ್ನು ಗ್ರಾಹಕರ ಟೇಬಲ್‍ಗೆ ತಂದು ಕೊಡುವವರು ಸಪ್ಲೇಯರ್ಸ್ ಆಗಿದ್ದರು. ಇದೀಗ ಸಪ್ಲೇಯರ್ಸ್ ಬದಲಾಗಿ ಲೇಡಿ ರೋಬೋ ಬಳಕೆ ಮಾಡಲು ಹೋಟೆಲ್ ನಿರ್ಧರಿಸಿದೆ. ಈಗಾಗಲೇ ಲೇಡಿ ರೋಬೋ ಮೈಸೂರು ರೇಷ್ಮೆ ಸೀರೆ ಉಟ್ಟು ಗ್ರಾಹಕರಿಗೆ ಊಟ ತಿಂಡಿ ಸಪ್ಲೈ ಮಾಡುತ್ತಿದ್ದು, ಇದು ಮೈಸೂರಿನ ಸಿದ್ದಾರ್ಥ ಹೋಟೆಲ್‍ನ ಪ್ರಮುಖ ಆಕರ್ಷಣೆಯಾಗಿದೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರುವವರೆಗೂ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು
Advertisement
Advertisement
ರೋಬೋ ಅಡುಗೆ ಕೋಣೆಯಿಂದ ಗ್ರಾಹಕರ ಟೇಬಲ್‍ಗೆ ಊಟ ತಿಂಡಿ ಸಪ್ಲೈ ಸಲಿಸಾಗಿ ಮಾಡುತ್ತಿದೆ. 2.5 ಲಕ್ಷ ರೂ. ವೆಚ್ಚದಲ್ಲಿ ರೋಬೋ ಸಿದ್ಧಪಡಿಸಲಾಗಿದೆ. ಬ್ಯಾಟರಿ ಚಾಲಿತ ರೋಬೋ ಇದ್ದಾಗಿದ್ದು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ. ಇದನ್ನೂ ಓದಿ: ಮುಂದಿನ ವರ್ಷದಿಂದ ಸಮವಸ್ತ್ರ ಗೊಂದಲ ಇಲ್ಲದಂತೆ ಕಾನೂನು : ಬಿ.ಸಿ ನಾಗೇಶ್
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹೋಟೆಲ್ ಮಾಲೀಕರಾದ ಸಿದ್ದಾರ್ಥ್ ಗಿರಿ, ನಾವು ಈ ರೋಬೋವನ್ನು ಡೆಲ್ಲಿಯಿಂದ ಖರೀದಿದ್ದೇವೆ. 3 ವರ್ಷಗಳಿಂದ ರೋಬೋ ಅನುಷ್ಠಾನದ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಇದೀಗ ಪ್ರತ್ಯೇಕ ಐಟಿ ಟೀಮ್ ಜೊತೆ ಹೋಟೆಲ್‍ನಲ್ಲಿ ರೋಬೋ ಕಾರ್ಯಾಚರಿಸುತ್ತಿದೆ ಎಂದರು.
ಕೊರೊನಾ ಟೈಮ್‍ನಲ್ಲಿ ನಮಗೆ ರೋಬೋ ಬಗ್ಗೆ ಚಿಂತನೆ ಹೆಚ್ಚಾಯಿತು. ಇದೀಗ ರೋಬೋವನ್ನು ಟ್ರಯಲ್ ರನ್ ಮಾಡುತ್ತಿದ್ದೇವೆ. ಆರ್ಡರ್ ತೆಗೆದುಕೊಂಡು ಬಳಿಕ ರೋಬೋ ಕೈಯಲ್ಲಿ ಹಿಡಿದುಕೊಂಡಿರುವ ತಟ್ಟೆ ಮೇಲೆ ಊಟ-ತಿಂಡಿ ಇಟ್ಟರೆ ಗ್ರಾಹಕರ ಬಳಿ ತೆರಳಿ ಅದು ಸರ್ವ್ ಮಾಡುತ್ತದೆ. ವಾಯ್ಸ್ ಕಮಾಂಡ್ ಮೂಲಕ ಇದನ್ನು ನಿಯಂತ್ರಿಸಲಾಗುತ್ತಿದೆ. ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೋಬೋ ಸಿಸ್ಟಮ್ ಆಳವಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.