ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣ ರಾಮಸ್ವಾಮಿ ಬಡಾವಣೆಯಲ್ಲಿ ಹಾಡಹಗಲೇ ದರೋಡೆ (Robbery) ನಡೆದಿದೆ.
ಒಂಟಿ ಮಹಿಳೆ ಇರೋದನ್ನ ಖಚಿತಪಡಿಸಿಕೊಂಡ ಖದೀಮರು ಪಾರ್ಸೆಲ್ ಕೊಡುವ ನೆಪದಲ್ಲಿ ಮನೆ ಬಾಗಿಲು ತೆಗೆಸಿದ್ದಾರೆ. ಬಳಿಕ ಏಕಾಏಕಿ ಮನೆ ಒಳಗೆ ನುಗ್ಗಿ ದಾಕ್ಷಾಯಿಣಿಯ ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ (Plaster) ಹಾಕಿದ್ದಾರೆ. ಅಲ್ಲದೆ ಅವರು ಧರಿಸಿದ್ದ ಚಿನ್ನದ ಮಾಂಗಲ್ಯ ಸರ, ಬಳೆ ಉಂಗುರ ಕಿತ್ತುಕೊಂಡಿದ್ದಾರೆ. ಇದನ್ನೂ ಓದಿ: ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ ಶಿಕ್ಷಕಿ ಸಾವು
ಇದಾದ ಬಳಿಕ ಬೀರುವಿನಲ್ಲಿದ್ದ ಮತ್ತೊಂದು ಜೊತೆ ಬಳೆ, ನೆಕ್ಲೆಸ್, ತಲೆಬೊಟ್ಟು ಎಲ್ಲವನ್ನು ದೋಚಿದ್ದಾರೆ. ಒಟ್ಟು 175 ಗ್ರಾಂ ಗೂ ಹೆಚ್ಚು ಚಿನ್ನ (Gold) ದ ಒಡವೆ ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರು ಕನ್ನಡ, ತಮಿಳು, ಹಿಂದಿ ಮಾತನಾಡುತ್ತಿದ್ದರು ಎಂದು ಗೃಹಿಣಿ ತಿಳಿಸಿದ್ದಾರೆ.
ದರೋಡೆಕೋರರು ಹೋದ ಮೇಲೆ ಕೈಗೆ ಕಟ್ಟಿದ್ದ ಹಗ್ಗ ಬಿಡಿಸಿಕೊಂಡು ಕೂಗಾಡಿದ್ದಾಗ ಅಕ್ಕಪಕ್ಕದವರು ಮನೆಗೆ ಬಂದಿದ್ದಾರೆ. ನಂತರ ಸ್ಥಳೀಯರು ನಂಜನಗೂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.