ಬೀದರ್: ಬೆಂಗಳೂರು (Bengaluru) ದರೋಡೆ ಪ್ರಕರಣ ಬೆನ್ನಲ್ಲೇ ಬೀದರ್‌ನಲ್ಲಿ (Bidar) ದರೋಡೆಯೊಂದು ನಡೆದಿದೆ. ಚಲಿಸುತ್ತಿದ್ದ ಕಾರನ್ನು ಪಂಚರ್ ಮಾಡಿ, 23 ಲಕ್ಷಕ್ಕೂ ಅಧಿಕ ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.
ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ (ನ.20) ಬೆಳಿಗ್ಗೆ 5ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪ್ರವೀಣ್ ಜರಗ ಎಂಬುವವರು ಕಾರಿನಲ್ಲಿ ಮಹಾರಾಷ್ಟ್ರದ ಯೇಥಗಾಂವ್‌ನಿಂದ ಹೈದ್ರಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆ ರಿಶಪ್ಶನ್‌ಗೆ ಹೊರಟಿದ್ದರು. ಈ ವೇಳೆ ಬಸವಕಲ್ಯಾಣದ ಸಸ್ತಾಪುರ ಗ್ರಾಮದ ಎನ್‌ಹೆಚ್-65ರಲ್ಲಿ ಹಾದು ಹೋಗುವಾಗ ಚೂಪಾದ ವಸ್ತು ಎಸೆದು ದರೋಡೆಕೋರರು ಕಾರಿನ ಟೈರ್ ಪಂಚರ್ ಮಾಡಿದ್ದಾರೆ.ಇದನ್ನೂ ಓದಿ: ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ದಿನವೇ ಕೊಟ್ಟ ಮಾತಿನ ಅಸ್ತ್ರ ಪ್ರಯೋಗಿಸಿದ ಸುರೇಶ್
ಟೈರ್ ಪಂಚರ್ ಆಗುತ್ತಿದ್ದಂತೆ 5ರಿಂದ 6 ಜನರು ಆಗಮಿಸಿ, ಕಾರನ್ನು ಸುತ್ತುವರೆದಿದ್ದಾರೆ. ಚಾಕು ತೋರಿಸಿ ಬೆದರಿಕೆ ಹಾಕಿ, ಸುಮಾರು 1.60 ಲಕ್ಷ ರೂ. ನಗದು, 223 ಗ್ರಾಂ ಬಂಗಾರ ಸೇರಿ 23.90 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ, ಎಸ್ಕೇಪ್ ಆಗಿದ್ದಾರೆ.
ಈ ಸಂಬಂಧ ಪ್ರವೀಣ್ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತದ ಬಳಿಕ ಮತ್ತೊಂದು ರ‍್ಯಾಲಿಗೆ ಅನುಮತಿ ಕೇಳಿದ ಟಿವಿಕೆ

