ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಭದ್ರತೆ ವಿಚಾರ ತೀವ್ರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಸರಣಿ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಇಂಡಿಯಾ ಗೇಟ್ ಕೂಗಳತೆ ದೂರದಲ್ಲಿರುವ ಪ್ರಗತಿ ಮೈದಾನ ಟನಲ್ ನಲ್ಲಿ (Pragati Maidan Tunnel) ನಡೆದ ದರೋಡೆ ಬಳಿಕ ಹಲವು ಲೂಟಿ ಪ್ರಕರಣಗಳು (Crime Case) ವರದಿಯಾಗುತ್ತಿವೆ.
#WATCH | A delivery agent and his associate were robbed at gunpoint of Rs 1.5 to Rs 2 lakh cash by a group of unknown assailants inside the Pragati Maidan Tunnel on June 24. Police registered a case and efforts are being made to apprehend the criminals: Delhi Police
(CCTV… pic.twitter.com/WchQo2lXSj
— ANI (@ANI) June 26, 2023
Advertisement
ಮಂಗಳವಾರ ಸಂಜೆ ಉದ್ಯಮಿಯೊಬ್ಬರಿಂದ ಸುಮಾರು 4 ಲಕ್ಷ ರೂ. ಲೂಟಿ ಮಾಡಿರುವ ಘಟನೆ ಕಾಶ್ಮೀರ್ ಗೇಟ್ ಪ್ರದೇಶದಲ್ಲಿ ನಡೆದಿದೆ. ಈ ನಡುವೆ ಲಾಹೋರಿ ಗೇಟ್ ಪ್ರದೇಶದ ಟೆಲಿಯಾನ್ ಮಾರುಕಟ್ಟೆಯಲ್ಲಿ ಮೂವರು ವ್ಯಕ್ತಿಗಳು 5 ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಹಾಡಹಗಲೇ ದರೋಡೆ – ನಡುರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ, ಗನ್ ತೋರ್ಸಿ ಹಣ ದೋಚಿದ ದುಷ್ಕರ್ಮಿಗಳು
Advertisement
Advertisement
ಇದಕ್ಕೂ ಮೊದಲು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ಹೊರಗಡೆ ಕಸ್ಟಮ್ ಅಧಿಕಾರಿಗಳಂತೆ ನಟಿಸಿ ಇಬ್ಬರು ವ್ಯಕ್ತಿಗಳು ಸೌದಿ ಅರೇಬಿಯಾದಿಂದ ವಾಪಸ್ಸಾದ ಪ್ರಯಾಣಿಕನಿಂದ 4 ಲಕ್ಷ ಮೌಲ್ಯದ ವಿದೇಶಿ ನೋಟುಗಳನ್ನ ಪಡೆದು ವಂಚಿಸಿದ್ದರು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ
Advertisement
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಗೋಲ್ಡಿ ಬ್ರಾರ್ ಹೆಸರಿನಲ್ಲಿ ಬೆದರಿಕೆ ಹಾಕಿ ಉದ್ಯಮಿಯಿಂದ 5 ಕೋಟಿ ಪಡೆದು ವಂಚಿಸಲಾಗಿದೆ. ಎಲ್ಲ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು ಸದ್ಯ ಪ್ರಗತಿ ಮೈದಾನ ಟನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದೇ ವಿಚಾರದಲ್ಲಿ ರಾಜಕಾರಣವೂ ಆರಂಭವಾಗಿದ್ದು ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಿಸುವ ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಕೈಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ನಮಗೆ ಕೊಡಿ ನಾವು ಮಾಡಿ ತೋರಿಸುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
Web Stories