ಬೆಂಗಳೂರು: ನಗರದ ಬ್ಯಾಂಕೊಂದರಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು 2 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಅತ್ತಬೆಲೆಯಲ್ಲಿ ನಡೆದಿದೆ.
ವೃತ್ತಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿರುವ ಏಡುಕೊಂಡಲ ಎಂಬವರೇ ಹಣ ಕಳೆದುಕೊಂಡ ವ್ಯಕ್ತಿ. ಇವರು ಇಂದು ಬೆಳ್ಳಗೆ 10.30 ರ ಸಮಯದಲ್ಲಿ ಅತ್ತಿಬೆಲೆಯ ಸಿಂಡಿಕೇಟ್ ಬ್ಯಾಂಕ್ಗೆ ಆಗಮಿಸಿ ಕೆಲಸಗಾರರಿಗೆ ಬಟವಾಡೆ ಮಾಡುವ ಸಲುವಾಗಿ ಹಣ ಡ್ರಾ ಮಾಡಿದ್ದಾರೆ.
Advertisement
ಏಡುಕೊಂಡಲ ಅವರು ಹಣ ಡ್ರಾ ಮಾಡಿಕೊಂಡು ಬ್ಯಾಂಕ್ನಿಂದ ಹೊರಬಂದ ಬಳಿಕ ಹಣವಿದ್ದ ಬ್ಯಾಗನ್ನು ತಮ್ಮ ಪಲ್ಸರ್ ಬೈಕ್ ನಲ್ಲಿ ಇಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ 10 ರೂ. ಮುಖ ಬೆಲೆಯ ನಾಲ್ಕು ನೋಟುಗಳನ್ನು ಕೆಳಕ್ಕೆ ಬೀಳಿಸಿ ತೆಗೆದುಕೊಳ್ಳುವಂತೆ ತಿಳಿಸಿದ್ದಾನೆ. ಆರೋಪಿಯ ಮಾತು ನಂಬಿ ಕೆಳಗೆ ಬಿದ್ದಿದ್ದ ನೋಟುಗಳನ್ನು ತೆಗೆದುಕೊಳ್ಳಲು ನೋಡುವಷ್ಟರಲ್ಲಿ ಬೈಕ್ ನಲ್ಲಿಟ್ಟಿದ್ದ 2 ಲಕ್ಷ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.
Advertisement
ಇದನ್ನೂ ಓದಿ: ಹಣ ಬಿದ್ದಿದೆ ಅಂತಾ ಕಾರಿನಿಂದ ಇಳಿಸ್ತಾರೆ- ಕಾರಿನಲ್ಲಿಯ ಬ್ಯಾಗ್ ತಗೊಂಡು ಎಸ್ಕೇಪ್ ಆಗ್ತಾರೆ
Advertisement
ಘಟನೆ ನಡೆದ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತಾದರೂ ಈ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಕಳ್ಳರ ಕೈಚಳಕದ ದೃಶ್ಯ ಸೆರೆಯಾಗಿಲ್ಲ. ಅಲ್ಲದೇ ಈ ಬ್ಯಾಂಕ್ ಮುಂಭಾಗದಲ್ಲಿ ಪ್ರತಿ ಶನಿವಾರ ಇಂತಹ ಘಟನೆಗಳು ನಡೆಯುತ್ತಿದ್ದು, ಕಳೆದ ವಾರ ಇದೇ ರೀತಿ 5 ಲಕ್ಷ ರೂ. ಹಣ ಕಳವು ಮಾಡಲಾಗಿತ್ತು.
Advertisement
ಘಟನೆಯ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
https://www.youtube.com/watch?v=_9mutYZrmUg