ನವದೆಹಲಿ: ಟ್ರಾಫಿಕ್ ಪೊಲೀಸರಂತೆ (Police) ಬಂದ ಇಬ್ಬರು ವ್ಯಕ್ತಿಗಳು ಪಾನ್ ಮಸಾಲಾ ಕಂಪನಿಯ ಉದ್ಯೋಗಿಯೊಬ್ಬರ ಕಾರು ಪರಿಶೀಲನೆ ಮಾಡುವಂತೆ ನಟಿಸಿ 50 ಲಕ್ಷ ರೂ. ಹಣ ದೋಚಿದ ಘಟನೆ ದೆಹಲಿಯ (New Delhi) ಇಂದ್ರಪ್ರಸ್ಥದಲ್ಲಿ ನಡೆದಿದೆ.
ಚಾಂದಿನಿ ಚೌಕ್ ಪ್ರದೇಶದ ಕುಚಾ ಘಾಸಿರಾಮ್ ಪ್ರದೇಶದಿಂದ ಕಂಪನಿಗೆ ಸೇರಬೇಕಾಗಿದ್ದ ಹಣವನ್ನು ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಸಲೀಂ ಗಡ್ ಮೇಲ್ಸೇತುವೆ ಬಳಿ ಆತನನ್ನು ಟ್ರಾಫಿಕ್ ಪೊಲೀಸರಂತೆ ಇಬ್ಬರು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ಹಣದ ಬ್ಯಾಗ್‍ನ್ನು ಹೊತ್ತು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ: ಹಮಾಸ್ ಉದ್ಧಟತನ
Advertisement
Advertisement
ಸಿಸಿಟಿವಿ ಪರಿಶೀಲನೆಯಲ್ಲಿ ಹಾಗೂ ಇಲ್ಲಿವರೆಗಿನ ತನಿಖೆಯಲ್ಲಿ ಆರೋಪಿಗಳು ಸಂಚಾರಿ ಪೊಲೀಸರಂತೆ ನಟಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಈ ಸಂಬಂಧ ಐಪಿಸಿ ಸೆಕ್ಷನ್ 419, 382/34ರ ಅಡಿಯಲ್ಲಿ ವಂಚನೆ ಹಾಗೂ ಕಳ್ಳತನ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ಸಹ ನಿಯೋಜಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ದಾಳಿಯಿಂದ ಸಾವಿಗೀಡಾದ ಮಕ್ಕಳ ಚಿತ್ರ ಹಂಚಿಕೊಂಡ ಇಸ್ರೇಲ್ – ಶವಗಳ ಮೇಲೆ ಐಸಿಸ್ ಧ್ವಜ
Web Stories