-ಆರೋಪಿಗಳ ಬಂಧನಕ್ಕೆ ಪೊಲೀಸರನ್ನೆ ಲಾರಿ ಡ್ರೈವರ್ ಮಾಡಿದ್ದ ಡಿಸಿಪಿ
ಬೆಂಗಳೂರು: ದಕ್ಷಿಣ ವಿಭಾಗ ಪೊಲೀಸರ ನಿದ್ದೆಗೆಡಿಸಿದ್ದ ನಟೋರಿಯಸ್ ರಾಬರ್ಸ್ ಗ್ಯಾಂಗ್ ಅದು. ಖರ್ತನಾಕ್ ಗ್ಯಾಂಗ್‍ನ ಹೆಡೆ ಮುರಿಕಟ್ಟಲು ಪೊಲೀಸರು ಎಲ್ಲಿಲ್ಲದ ಹರಸಹಾಸಪಡುತ್ತಿದ್ದರು. ದರೋಡೆಕೋರರ ಗ್ಯಾಂಗ್ ಬೆನ್ನ ಹಿಂದೆ ಬಿದ್ದಿದ್ದ ಪೊಲೀಸರಿಗೆ ಅಣ್ಣಾಮಲೈ ಕೊಟ್ಟ ಪ್ಲಾನ್ ನಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಟೋರಿಸ್ ರಾಬರ್ಸ್ ಗ್ಯಾಂಗ್ ಒಂದೇ ವಾರದಲ್ಲಿ ಲಾರಿ ಚಾಕನನ್ನ ಕೊಲೆ ಮಾಡಿ ಮತ್ತೊಬ್ಬನಿಗೆ ಇರಿದು ಹಣ ದೋಚಿದ್ದರು. ಇದು ದಕ್ಷಿಣ ವಿಭಾಗ ಪೊಲೀಸರ ಕಣ್ಣು ಕೆಂಪಾಗಿಸಿತ್ತು. ಲಾರಿ ಚಾಲಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಖದೀಮರ ಗ್ಯಾಂಗ್ ಬಂಧಿಸಲು ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದರು. ಆರೋಪಿಗಳ ಬಂಧನಕ್ಕೆ ಶ್ರಮಿಸುತ್ತಿದ್ದ ಪೊಲೀಸರಿಗೆ ತಕ್ಕ ಫಲ ಸಿಕ್ಕಿರಲಿಲ್ಲ. ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆರೋಪಿಗಳ ಬಂಧನಕ್ಕೆ ಚಕ್ರವ್ಯೂಹ ರೆಡಿ ಮಾಡಿದ್ದಾರೆ. ಡಿಸಿಪಿ ಅಣ್ಣಾಮಲೈ ರಚಿಸಿದ್ದ ಚಕ್ರವ್ಯೂಹ ಆರೋಪಿಗಳು ಸಿಲುಕಿ ಹಾಕಿಕೊಂಡಿದ್ದಾರೆ.
Advertisement
Advertisement
ಲಾರಿ ಸ್ಟ್ಯಾಂಡ್ ಗಳೆಲ್ಲವನ್ನ ಪರಿಶೀಲನೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಿದ್ದ ತನಿಖಾ ತಂಡಕ್ಕೆ ಅಣ್ಣಾಮಲೈ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಟ್ಟಿದ್ದಾರೆ. ಡಿಸಿಪಿ ಅಣ್ಣಾಮಲೆ ಕೊಟ್ಟ ಸಲಹೆ ಅಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದಾರೆ. ಲಾರಿ ಸ್ಟ್ಯಾಂಡ್ ನಿಂದ ಮೂರು ಲಾರಿ ಪಡೆದ ಪೊಲೀಸರು ಲಾರಿ ಚಾಲಕರು ಹಾಗೂ ಕ್ಲೀನರ್ ಆಗಿ ನೈಸ್ ರಸ್ತೆಗೆ ಲಗ್ಗೆ ಇಡುತ್ತಾರೆ. ಸತತ ಮೂರು ದಿನಗಳ ಕಾಲ ಆರೋಪಿಗಳಿಗಾಗಿ ಪೊಲೀಸರು ನೈಸ್ ರಸ್ತೆಯಲ್ಲಿ ಕಾದು ಕುಳಿತು ನಾಲ್ಕನೇ ದಿನಕ್ಕೆ ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಪ್ರಕರಣ ಸಂಬಂಧ ತೋಹಿದ್ ವರ್ದಾ, ಮುಧಾಸಿರ್, ಸಲ್ಮಾನ್ ಎಂಬವರನ್ನು ಬಂಧಿಸಿ ಪೊಲೀಸರು ತನಿಖೆ ಮಾಡಿದ್ದಾಗ ಇದೇ ತಿಂಗಳು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ರಾಮನಗರದಲ್ಲಿ ಎರಡು ಕಡೆ ಹಾಗೂ ವೆಸ್ಟ್ ಡಿವಿಷನ್ ನಲ್ಲಿ ಒಂದು ಕಡೆ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟನಲ್ಲಿ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಗಳಿಗೆ ಡಿಸಿಪಿ ಅಣ್ಣಾಮಲೈ ಪ್ಲಾನ್ ಮಾಸ್ಟರ್ ಸ್ಟ್ರೋಕ್ ನೀಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv