ಬೀದಿಗೆ ತಳ್ಳಲ್ಪಟ್ಟ ತಾಯಿಯ ಕಷ್ಟಕ್ಕೆ ಮರುಗಿದ ರೋರಿಂಗ್ ಸ್ಟಾರ್

Public TV
1 Min Read
srimurali copy

ಮಂಡ್ಯ: ಮಕ್ಕಳಿಂದ ಬೀದಿಗೆ ತಳ್ಳಲ್ಪಟ್ಟ ತಾಯಿಯೊಬ್ಬರು ಭಿಕ್ಷೆ ಬೇಡುತ್ತಿದ್ದನ್ನು ಕಂಡ ನಟ ಶ್ರೀಮುರಳಿ, ಮಹಿಳೆ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ.

ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದೆ. ಈ ವೇಳೆ ಸ್ನಾನಘಟ್ಟದ ಬಳಿ ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಾ ಕುಳಿತಿದ್ದರು. ಇದನ್ನು ಕಂಡ ಶ್ರೀಮುರಳಿ ಮಹಿಳೆಯ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿದ್ದಾರೆ. ಶ್ರೀಮುರುಳಿ ಅವರ ಆತ್ಮೀಯ ಮಾತು ಕಂಡ ಮಹಿಳೆ ತನ್ನ ಕಷ್ಟದ ಜೀವನವನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.

srimurali

ಮಹಿಳೆಯ ಕಣ್ಣೀರು ಕಂಡ ಶ್ರೀಮುರುಳಿ ಅವರು ತನ್ನೊಂದಿಗೆ ಬರುವಂತೆ ಆಹ್ವಾನವನ್ನು ನೀಡಿದರು. ಆದರೆ ಶ್ರೀಮುರಳಿ ಅವರ ಆಹ್ವಾನವನ್ನು ಮಹಿಳೆ ನಯವಾಗಿ ತಿರಸ್ಕರಿಸಿದರು. ಬಳಿಕ ಮಹಿಳೆಗೆ ಸಹಾಯ ಮಾಡುವ ಭರವಸೆಯನ್ನು ನೀಡಿದರು.

ಈ ಹಿಂದೆಯೂ ಇಂತಹ ಅಸಹಾಯ ಮಹಿಳೆಯ ಬಳಿ ಶ್ರೀಮುರಳಿ ಕುಳಿತು ಆತ್ಮೀಯವಾಗಿ ಮಾತನಾಡಿದ್ದರು. ಅವರ ಕಷ್ಟ ಸುಖ ಆಲಿಸುವ ಮೂಲಕ ನೋವನ್ನು ಮರೆಯುವಂತೆ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಶ್ರೀಮುರಳಿ ಅವರ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇಂತಹ ತಾಯಿಯರು, ವೃದ್ಧರಿಗೆ ನಿಮ್ಮ ಸಮಯ ಕೊಟ್ಟು ಸುಖ ದುಃಖ ವಿಚಾರಿಸಿದ್ದಕ್ಕೆ ಧನ್ಯವಾದ. ಅವರಿಗೆ ನೀವು ಮಾತನಾಡಿಸಿದ ದಿನ ಸ್ಮರಣೀಯವಾಗಿರುತ್ತದೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

srimurali 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *