ಶಿವ ದೇವಾಲಯಕ್ಕೆ ಹೊರಟವರು ರಸ್ತೆ ಅಪಘಾತದ ನಂತ್ರ ಕಣ್ಮರೆ

Advertisements

ಹೈದರಾಬಾದ್: ಶಿವ ದೇವಾಲಯಕ್ಕೆ ಹೊರಟಿದ್ದ ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿಯ ಪೈಕಿ ಐವರು ನದಿಗೆ ಬಿದ್ದು ಕಣ್ಣರೆಯಾಗಿದ್ದಾರೆ. ಅಲ್ಲದೆ ರಕ್ಷಿಸಲ್ಪಟ್ಟ 7 ಮಂದಿಯಲ್ಲಿ ಬಾಲಕಿಯೋರ್ವಳು ಅಸುನೀಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

Advertisements

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಗುರುವಾರ ರಾತ್ರಿ ವೇಳೆ ಸೇತುವೆ ಮೇಲೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಆಟೋ ರಿಕ್ಷಾ ನದಿಗೆ ಬಿದ್ದಿದ್ದು, ಬಾಲಕಿ ಸಾವನ್ನಪ್ಪಿದ್ದು,  ಐವರು ಕಣ್ಮರೆಯಾಗಿದ್ದಾರೆ. ಇದನ್ನೂ ಓದಿ: ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್​ಕಮ್ ನೋಟ್

Advertisements

ಸುಮಾರು 12 ಮಂದಿ ಆತ್ಮಕೂರ್ ಪಟ್ಟಣದಿಂದ ಸಮೀಪದ ಶಿವ ದೇವಾಲಯಕ್ಕೆ ವಿಶೇಷ ಪೂಜೆಗೆಂದು ಆಟೋದಲ್ಲಿ ತೆರಳುತ್ತಿದ್ದರು. ರಾತ್ರಿ 9.30ರ ಸುಮಾರಿಗೆ ನೆಲ್ಲೂರಿನ ಸಂಗೆಮ್ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿದ್ದ 12 ಜನರಲ್ಲಿ 7 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಅವರಲ್ಲಿ ಒಬ್ಬ ಬಾಲಕಿ ಮೃತಪಟ್ಟಿದ್ದಾಳೆ. ಆಟೋದಲ್ಲಿದ್ದ ಉಳಿದ ಐವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ:  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲೂ ಪ್ರಸಾದ್ ಪುತ್ರ

6 ಮಂದಿಯನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಏಳು ಜನರನ್ನು ರಕ್ಷಿಸಿದ್ದರು. ಇತರರು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ. ರಾತ್ರಿಯಾಗಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡಚಣೆಯುಂಟಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisements

Advertisements
Exit mobile version