– ವೈಯಾಲಿಕಾವಲ್‌ನಲ್ಲಿ ಕುಸಿದ ರಸ್ತೆ, ಬೃಹತ್ ಗುಂಡಿ ನಿರ್ಮಾಣ
ಬೆಂಗಳೂರು: ನಗರದಲ್ಲಿ ಗುಂಡಿಬಿದ್ದ ರಸ್ತೆಗಳಿಂದ (Road Pothole) ಜನ ರೋಸಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಮತ್ತೊಂದು ಗುಂಡಿ ಭಾಗ್ಯವನ್ನೂ ಕೊಟ್ಟಿದ್ದಾರೆಂದು ಸರ್ಕಾರವನ್ನ ಜನ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ನಗರವನ್ನ ಗುಂಡಿಮುಕ್ತ ಮಾಡಲು 2ನೇ ಬಾರಿಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲು ಇನ್ನು 48 ಗಂಟೆಗಳು ಮಾತ್ರವೇ ಬಾಕಿಯಿದೆ. ಅಷ್ಟರಲ್ಲಿ ಮತ್ತೊಂದು ಕಡೆಯಿಂದ ಹೊಸ ಗುಂಡಿಗಳು ನಿರ್ಮಾಣವಾಗುತ್ತಿವೆ.
ಹೌದು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು (GBA Commissioner) ನವೆಂಬರ್ 10ರ ವರೆಗೆ ರಸ್ತೆಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ. ಈ ಅವಧಿಗೆ ಇನ್ನು 48 ಗಂಟೆಗಳಷ್ಟೇ ಬಾಕಿಯಿದೆ. ಜಿಬಿಎ 1,700 ಕೋಟಿ ರೂ. ವೆಚ್ಚದಲ್ಲಿ ಒಂದು ಕಡೆಯಿಂದ ರಸ್ತೆ ಗುಂಡಿಯನ್ನ ಮುಚ್ಚುತ್ತಿದ್ದರೆ, ಮತ್ತೊಂದು ಕಡೆಯಿಂದ ಹೊಸ ಗುಂಡಿಗಳು ನಿರ್ಮಾಣವಾಗುತ್ತಿದೆ. ಇದು ಅಧಿಕಾರಿಗಳಿಗೂ ತಲೆನೋವಾಗಿದ್ದು, ಜನರನ್ನೂ ಹೈರಾಣಾಗಿಸಿದೆ.
ವೈಯಾಲಿಕಾವಲ್‌ನಲ್ಲಿ ಕುಸಿದ ರಸ್ತೆ:
ಈ ಎಲ್ಲ ಬೆಳವಣಿಗೆ ನಡುವೆ ಮಲ್ಲೇಶ್ವರಂನ ವೈಯಾಲಿಕಾವಲ್‌ನಲ್ಲಿ ರಸ್ತೆ ಕುಸಿದು ಬೃಹತ್ ಗುಂಡಿ ನಿರ್ಮಾಣವಾಗಿದೆ. ಗುಂಡಿ ಸುತ್ತಲೂ ಬ್ಯಾರಿಕೇಡ್ ಹಾಕಿ ವಾಹನಗಳು ಓಡಾಡದಂತೆ ಸೂಚನೆ ಕೊಟ್ಟಿದ್ದಾರೆ. ಆದ್ರೆ ಈವರೆಗೂ ಅಧಿಕಾರಿಗಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದಕ್ಕೆ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ.


