ಗದಗ: 15 ವರ್ಷಗಳಿಂದ ಮಕ್ಕಳಿಲ್ಲದೇ, ತಮಗೆ ಮಕ್ಕಳನ್ನು ಕರುಣಿಸುವಂತೆ ದೇವರಿಗೆ ಹರಕೆ ಹೊತ್ತು ಹಿಂದಿರುಗಿ ಬರುತ್ತಿರುವಾಗಲೇ ಭೀಕರ ಅಪಘಾತಕ್ಕೀಡಾಗಿ (Accident) ದಂಪತಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
Advertisement
ಹುಬ್ಬಳ್ಳಿ (Hubballi) ಮೂಲದ ಬೈಕ್ ಸವಾರ ಸಹದೇವಪ್ಪ ದೇವರಮನಿ (45) ಹಾಗೂ ದೀಪಾ ದೇವರಮನೆ (36) ಮೃತ ದಂಪತಿ. ಜಿಲ್ಲೆಯ ನರಗುಂದ ತಾಲ್ಲೂಕಿನ ಬೈರನಹಟ್ಟಿ ಬಳಿ, ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಕಾರು ಮತ್ತು ಬೈಕು ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ – ತಮಿಳುನಾಡು, ಕೇರಳದಲ್ಲೂ ತನಿಖೆ ಚುರುಕು : ಪ್ರವೀಣ್ ಸೂದ್
Advertisement
Advertisement
ಮದುವೆಯಾಗಿ (Marriage) 15 ವರ್ಷವಾದ್ರೂ ಮಕ್ಕಳಾಗಿರಲಿಲ್ಲ. ಮಕ್ಕಳಿಗಾಗಿ ಹರಕೆ ಹೊತ್ತು ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ದೇವರಿಗೆ ಪ್ರತಿ ಅಮವಾಸ್ಯೆಗೆ ಹೋಗುತ್ತಿದ್ದರು. ಇಂದು ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ಮಹಿಂದ್ರಾ TUV-300 ಕಾರು ಸರ್ವಿಸ್‌ಗಾಗಿ ಹುಬ್ಬಳ್ಳಿಗೆ ಹೊರಟಿತ್ತು. ಇದೇ ಮಾರ್ಗದಲ್ಲಿ ದಂಪತಿ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ (Road Accident) ಸಂಭವಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಿರುಕನ ಕನಸು ಕಾಣುತ್ತಿದೆ: ಯಡಿಯೂರಪ್ಪ
Advertisement
ಕಾರ್ ನಲ್ಲಿದ್ದ ಇಬ್ಬರು ಸಹ ಗಾಯಗೊಂಡಿದ್ದು, ಅವರನ್ನ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಸ್ಪೋಟಗೊಂಡು ಹೊತ್ತಿ ಉರಿದ ವಾಹನಗಳ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.