ಮಂಡ್ಯ: ಅವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಸಂಭ್ರಮದಿಂದಲೇ ತಮ್ಮೂರಿಗೆ ಹೋಗ್ತಾ ಇದ್ರು, ಇನ್ನೊಂದು ಕಡೆ ಸ್ನೇಹಿತರೆಲ್ಲರೂ ಟೂರ್ ಮುಗಿಸಿಕೊಂಡು ಏಂಜಾಯ್ ಮೂಡ್‍ನಲ್ಲಿ ವಾಪಸ್ಸು ಹೋಗುತ್ತಿದ್ರು. ಈ ವೇಳೆ ನಡೆದ ಡೆಡ್ಲಿ ಆಕ್ಸಿಡೆಂಟ್‍ನಿಂದ ಐದು ಮಂದಿ ಸಾವಿನ ಕದ ತಟ್ಟಿದ್ರೆ, ಇನ್ನೂಳಿದ ಐದು ಮಂದಿ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿನಿಮೀಯ ರೀತಿಯಲ್ಲಿ ನಡೆದಿರುವ ಈ ಭೀಕರ ಅಪಘಾತವನ್ನು ಕಂಡು ಜನರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು (Bengaluru)- ಮಂಗಳೂರು (Mangaluru) ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.
Advertisement
ಆ ಸ್ಥಳ ಡೆಡ್ಲಿ ಆಕ್ಸಿಡೆಂಟ್‍ನ (Accident) ಹಾಟ್ ಸ್ಪಾಟ್, ಆ ಸ್ಥಳದಲ್ಲಿ ತಿಂಗಳಿಗೆ ನಾಲ್ಕೈದು ಅಪಘಾತಗಳು ಜರುಗುತ್ತವೆ. ಇದೀಗ ಆ ಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಊರಿಗೆ ಹೋಗುತ್ತಿದ್ದವರು ಹಾಗೂ ಪ್ರವಾಸ ಮುಗಿಸಿ ಮನೆಗೆ ಹೋಗುತ್ತಿದ್ದ ಪೈಕಿ ಐದು ಮಂದಿ ಭೀಕರ ಅಪಘಾತದಲ್ಲಿ ಸಾವಿನ ಮನೆ ಸೇರಿದ್ದು, ಇನ್ನೂಳಿದ ಐದು ಮಂದಿ ಆಸ್ಪತ್ರೆಗೆ (Hospital) ಸೇರಿದ್ದಾರೆ. ಕಳೆದ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಸಮೀಪದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಸಿನಿಮೀಯ ಸ್ಟೈಲ್‍ನಲ್ಲಿ ಭೀಕರ ಅಪಘಾತ ಸಂಭವಿಸಿದೆ.
Advertisement
Advertisement
ಹಾಸನ ಮೂಲದ ಐವರು ತಮ್ಮ ಸಂಬಂಧಿಕರ ಮದುವೆಗೆ ಬೆಂಗಳೂರಿಗೆ ಬಂದಿದ್ದಾರೆ. ಮದುವೆ ಮನೆಯಲ್ಲಿ ನೆಂಟರಿಷ್ಟರೊಂದಿಗೆ ನಗು-ನಗುತ್ತಾ ಬೆರತು ಮದುವೆ ಕಾರ್ಯವನ್ನು ಮುಗಿಸಿ ವಾಪಸ್ಸು ತಾವು ಬಂದಿದ್ದ ಇನೋವಾ ಕಾರ್‌ನಲ್ಲಿಯೇ ಹಾಸನಕ್ಕೆ ಹೋಗಲು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದಾರೆ. ಇತ್ತ ಇದೇ ಹೆದ್ದಾರಿಯಲ್ಲಿ ತಮಿಳುನಾಡು ಮೂಲದ ಐದು ಮಂದಿ ಸ್ನೇಹಿತರು ಚಿಕ್ಕಮಗಳೂರು ಭಾಗಕ್ಕೆ ಪ್ರವಾಸಕ್ಕೆ ತೆರಳಿ ಏಂಜಾಯ್ ಮಾಡಿ ತಮ್ಮ ಪ್ರವಾಸ ಮುಗಿಸಿಕೊಂಡು ವಾಪಸ್ ತಮಿಳುನಾಡಿಗೆ ತೆರಳಲು ತಮ್ಮ ಶಿಫ್ಟ್ ಕಾರ್‌ನಲ್ಲಿ ಬಂದಿದ್ದಾರೆ. ಈ ವೇಳೆ 150 ಕಿಲೋಮೀಟರ್ ಸ್ಪೀಡ್‍ನಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಇನೋವಾ ಕಾರ್ ನಾಗತಿಹಳ್ಳಿ ಬಳಿ ಡೌನ್ ಇರುವ ರಸ್ತೆಯಲ್ಲಿ ಮಳೆಯಿಂದ ಚಾಲಕನ ನಿಯಂತ್ರಣಕ್ಕೆ ತಪ್ಪಿ ಏಕಾಏಕಿ ಡಿವೈಡರ್ ಮೇಲೆ ಹತ್ತಿದೆ. ಈ ವೇಳೆ ಚಾಲಕ ಬ್ರೇಕ್ ಹಾಕಲು ಹೋದ ವೇಳೆ ಬ್ರೇಕ್ ಸಹ ಅಪ್ಲೈ ಆಗಿಲ್ಲ. ಹೀಗಾಗಿ ಕಾರ್ ಡಿವೈಡರ್ ಹಾರಿ ಇನ್ನೊಂದು ಕಡೆ ಬರುತ್ತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಒಂದೇ ದಿನ 10 ಜನರಿಗೆ ಕಡಿದ ಹುಚ್ಚುನಾಯಿ
Advertisement
ಎರಡು ಕಾರುಗಳು ಹೈವೇಯಲ್ಲಿ ವೇಗವಾಗಿ ಬರುತ್ತಿದ್ದ ಕಾರಣ ಮುಖಾಮುಖಿ ಡಿಕ್ಕಿಯಾದ ತಕ್ಷಣ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ಮದುವೆ ಮುಗಿಸಿ ಬರುತ್ತಿದ್ದ ಹಾಸನದ ಮೂಲದ ಶ್ರೀವಾಸ್‍ಮೂರ್ತಿ, ಜಯಂತಿ ಹಾಗೂ ಪ್ರಭಾಕರ್, ಪ್ರವಾಸ ಮುಗಿಸಿ ತಮಿಳುನಾಡಿಗೆ ಹೋಗುತ್ತಿದ್ದ ಕಿಶೋರ್ ಹಾಗೂ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದಲ್ಲದೇ ಹಾಸನ ಮೂಲದ ಅಚಲ್, ಲಕ್ಷ್ಮೀನಾರಾಯಣ್ ಹಾಗೂ ತಮಿಳುನಾಡು ಮೂಲದ ಗೌತಮ್, ಶಬರೀಶ್, ಕೆವಿನ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಬಿಂಡಿಗನವಿಲೆ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರೊಂದಿಗೆ ಕೈ ಜೋಡಿಸಿ ಕಾರಿನಲ್ಲಿ ಇದ್ದವರನ್ನು ಹೊರ ತೆಗೆದು ಆಸ್ಪತ್ರೆ ದಾಖಲಿಸಿದ್ದಾರೆ. ಇದೀಗ ಸಾವನ್ನಪ್ಪಿರುವವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪಿಕ್ನಿಕ್ ಮುಗಿಸಿ ಬರ್ತಿದ್ದ ಬಸ್ ಪಲ್ಟಿ – ಇಬ್ಬರು ಶಾಲಾ ವಿದ್ಯಾರ್ಥಿಗಳ ದುರ್ಮರಣ