ಬೆಂಗಳೂರು: ಚೆಕ್ ಬೌನ್ಸ್ (Check Bounce) ಪ್ರಕರಣದಲ್ಲಿ ಮಾಜಿ ಸಚಿವ ಆರ್ ಎಲ್ ಜಾಲಪ್ಪ (RL Jalappa) ಅವರ ಪುತ್ರ ನರಸಿಂಹಮೂರ್ತಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Special Courts for MPs/MLAs) ನರಸಿಂಹಮೂರ್ತಿ (Narasimha Murthy) 6 ತಿಂಗಳು ಜೈಲು ಶಿಕ್ಷೆ, 20 ಲಕ್ಷ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಇಂದು ಕೇರಳಕ್ಕೆ ತೆರಳಲಿದ್ದಾನೆ ಬೆಂಗಳೂರು ಬಾಂಬ್ ಸ್ಫೋಟದ ಆರೋಪಿ ಮದನಿ
Advertisement
Advertisement
ಪ್ರಕಾಶ್ ಕುಮಾರ್ ಎಂಬುವವರ ಪುತ್ರಿಗೆ ಸೀಟ್ ಕೊಡಿಸಲು ನರಸಿಂಹಮೂರ್ತಿ 45 ಲಕ್ಷ ರೂ. ಹಣವನ್ನು ಪಡೆದಿದ್ದರು. ಮೆಡಿಕಲ್ ಸೀಟ್ ಸಿಗದ ಕಾರಣ 45 ಲಕ್ಷ ರೂ.ಗೆ ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿತ್ತು. ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಕ್ಕೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು.
Advertisement
ಶಿಕ್ಷೆ ಪ್ರಮಾಣವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್ 2 ತಿಂಗಳು ಕಾಲಾವಕಾಶ ನೀಡಿದೆ.