ನವದೆಹಲಿ: ದೆಹಲಿ, ಗುಜರಾತ್, ಉತ್ತರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿಯಂತ್ರಿಸಲು ಅಧಿಕಾರಿಗಳು ನಾನಾ ರೀತಿಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಕಠಿಣ ನಿಯಮಗಳಿಗೂ ಬಗ್ಗದ ಜನರಿಗೆ ಪೊಲೀಸರು ಹಾಗೂ ಅಧಿಕಾರಿಗಳು ದಂಡದ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
Advertisement
ಕೊರೊನಾ ನಿಯಂತ್ರಿಸುವ ಸಲುವಾಗಿ ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಮಾಸ್ಕ್, ಸಾರ್ವಜನಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ, ಚಂಡೀಗಢ ಮೊದಲಾದ ರಾಜ್ಯಗಳಲ್ಲೂ ಇಂದಿನಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ, ಸಂಚಾರದ ವೇಳೆ ಉಗುಳುವುದು ಕಂಡು ಬಂದರೆ ಅಂಥವರಿಗೆ ದಂಡದ ಬಿಸಿ ಮುಟ್ಟಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ. ಅದರಂತೆ ಹಲವು ರಾಜ್ಯಗಳು ಹಲವು ರೀತಿಯಲ್ಲಿ ದಂಡ ಶುಲ್ಕವನ್ನು ನಿಗದಿಮಾಡಿವೆ. ಇದನ್ನೂ ಓದಿ: ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್
Advertisement
Advertisement
ನಿಯಮ ಉಲ್ಲಂಘಿಸುವವರಿಗೆ ಕರ್ನಾಟಕದಲ್ಲಿ ಪ್ರತಿ ಅಪರಾಧಕ್ಕೆ 250 ರೂ., ಗೋವಾದಲ್ಲಿ 200 ರೂ., ಆಂಧ್ರಪ್ರದೇಶದಲ್ಲಿ 100 ರೂ. ಇದ್ದರೆ, ಒಡಿಶಾ, ಗುಜರಾತ್, ಉತ್ತರಖಾಂಡ, ತಮಿಳುನಾಡು, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ 500 ರಿಂದ 5 ಸಾವಿರ ರೂ. ವರೆಗೂ ದಂಡದ ಮೊತ್ತವನ್ನು ನಿಗದಿ ಮಾಡಲಾಗಿದೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಇದನ್ನೂ ಓದಿ: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ
Advertisement
ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ? (ರೂಪಾಯಿಗಳಲ್ಲಿ)
ಕರ್ನಾಟಕ- 250
ಒಡಿಶಾ- 2 ರಿಂದ 5 ಸಾವಿರ
ಉತ್ತರಖಾಂಡ್- 100 ರಿಂದ 1000
ದೆಹಲಿ- 500 (ಪ್ರತಿ ಅಪರಾಧಕ್ಕೆ)
ತೆಲಂಗಾಣ- 1000
ತಮಿಳುನಾಡು- 500
ಮಧ್ಯಪ್ರದೇಶ – 500
ರಾಜಾಸ್ಥಾನ- 500
ಗೋವಾ – 200
ಗುಜರಾತ್- 1000
ಆಂಧ್ರಪ್ರದೇಶ- 100
ಚಂಡೀಗಢ- 500
ಛತ್ತಿಸ್‌ಗಢ- 500
ಹರಿಯಾಣ- 500