ಕೊಹ್ಲಿ ಭರ್ಜರಿ ಶತಕ ಹಾಗೂ ಫಾಫ್ ಡು ಪ್ಲೆಸಿಸ್ ಸ್ಫೋಟಕ ಅರ್ಧ ಶತಕದ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ (RCB) ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೇ 18ರಂದು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಸಿಬಿ ಗೆದ್ದಿದ್ದಕ್ಕೆ ‘ಕಾಂತಾರ’ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ಪುತ್ರಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್‌ಸಿಬಿ ತಂಡಕ್ಕೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ಬೆಂಗಳೂರು ತಂಡ ಅಖಾಡದಲ್ಲಿದೆ ಅಂದರೆ ಕಾದು ಕೂರುವ ಅಪಾರ ಅಭಿಮಾನಿಗಳಿದ್ದಾರೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಹೆನ್ರಿಚ್ ಕ್ಲಾಸೆನ್ ಭರ್ಜರಿ ಶತಕದೊಂದಿಗೆ 20 ಓವರ್‌ಗಳಲ್ಲಿ 186 ರನ್ ಗಳಿಸಿತ್ತು. 187 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಗೆದ್ದು ಬೀಗಿತು.
6️⃣th hundred for the King in the IPL and it’s come in an all important chase! ????
Only RCB Hall of Famer, Chris Gayle, has as many hundreds ????#PlayBold #ನಮ್ಮRCB #IPL2023 #SRHvRCB @imVkohli pic.twitter.com/lIVWX0YsJD
— Royal Challengers Bangalore (@RCBTweets) May 18, 2023
ರಿಷಬ್ ಶೆಟ್ಟಿ (Rishab Shetty) ಕುಟುಂಬ ಆರ್‌ಸಿಬಿ ತಂಡಕ್ಕೆ ಅಭಿಮಾನಿಯಾಗಿದ್ದು, ರಿಷಬ್ ಮತ್ತು ಅವರ ಪುತ್ರಿ ರಾಧ್ಯಾ (Radya) ಕೂಡ ಆರ್‌ಸಿಬಿ ಗೆಲುವಿಗೆ ಜೈ ಎಂದಿದ್ದಾರೆ. ಆರ್‌ಸಿಬಿ ಗೆದ್ದಿದ್ದಕ್ಕೆ ಖುಷಿಯಿಂದ ಬೀಗುತ್ತಿರುವ ವೀಡಿಯೋವನ್ನ ನಟ ರಿಷಬ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಆದಿಪುರುಷ್’ ಪೋಸ್ಟರ್‌ನಲ್ಲಿ ಮತ್ತೆ ಎಡವಟ್ಟು- ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ
View this post on Instagram
‘ಕಾಂತಾರ’ ಸಕ್ಸಸ್ ನಂತರ ಕಾಂತಾರ 2 ಸಿನಿಮಾ ತಯಾರಿಯಲ್ಲಿದ್ದಾರೆ. ಕಥೆ ಈಗಾಗಲೇ ಸಿದ್ಧವಾಗಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.