ಆರ್‌ಸಿಬಿ ರೋಚಕವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಈ ಬಾರಿ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಸಿಎಸ್‌ಕೆ ಮುಂದೆ ಗೆದ್ದು ಬೀಗಿದೆ. ಹೀಗಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ನೇರವಾಗಿ ರಿಷಬ್ ಶೆಟ್ಟಿ (Rishab Shetty) ವೀಕ್ಷಿಸಿದ್ದಾರೆ. ಅವರ ಮೊದಲ ಪಂದ್ಯದ ಅನುಭವ ಹೇಗಿತ್ತು? ಎಂದು ರಿಷಬ್ ಮಾತನಾಡಿದ್ದಾರೆ. ಆರ್‌ಸಿಬಿ ವಿನ್ ಆಗಲೇಬೇಕು ಎಂದು ಪಂದ್ಯ ಶುರುವಾಗುವ ಮುನ್ನ ಶುಭಹಾರೈಸಿದ್ದರು. ಇದೀಗ ಆರ್‌ಸಿಬಿ (RCB) ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಷಬ್ ವಿಡಿಯೋ ಸದ್ದು ಮಾಡುತ್ತಿದೆ. ಇದನ್ನೂ ಓದಿ:ನಟಿ ಪವಿತ್ರಾ ಜಯರಾಮ್ ಸಾವಿನ ಬಳಿಕ ಸ್ನೇಹಿತ ಚಂದು ಆತ್ಮಹತ್ಯೆ
ತುಂಬಾ ಖುಷಿಯಾಗುತ್ತಿದೆ. ವಿಷಯ ಏನೆಂದರೆ ನಾನು ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಮ್ಯಾಚ್ ನೋಡ್ತಾ ಇರೋದು. ಪ್ಲೇ-ಆಪ್ ಹೋಗಬೇಕು ಎಂಬ ಆಸೆಯಿದೆ ಎಂದಿದ್ದಾರೆ ರಿಷಬ್ ಶೆಟ್ಟಿ. ಮುಂಚೆಯಿಂದ ಕೂಡ ನಮ್ಮ ಬೆಂಗಳೂರು ಟೀಮ್ ಬೆಂಬಲಿಸುತ್ತಿದ್ದೆ. ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್‌ಗೆ ಫ್ಯಾನ್ ನಾನು. ಐಪಿಎಲ್ ಬಂದ ಮೇಲೆ ಆರ್‌ಸಿಬಿ ಎನ್ನುವ ಹೋರಾಟ ನಮ್ಮ ಸರ್ಕಲ್‌ನಲ್ಲಿ ನಡೆಯುತ್ತಿತ್ತು. ನನಗೆ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಇಷ್ಟ ಎಂದು ಮಾತನಾಡಿದ್ದಾರೆ.
View this post on Instagram
ಈ ವೇಳೆ, ಆರ್‌ಸಿಬಿ ಹೆಸರು ಬದಲಿಸಿದ ಪ್ರೋಮೋ ಬಗ್ಗೆ ಮಾತನಾಡಿದ್ದಾರೆ. ತಂಡ ನನಗೆ ಅಪ್ರೋಚ್ ಮಾಡಿದಾಗ ಕಾಲ್‌ನಲ್ಲಿ ಡ್ಯಾನೀಶ್ ಸೇಠ್ ಕೂಡ ಇದ್ದರು. ಹೊಂಬಾಳೆ ಸಂಸ್ಥೆ ನಿರ್ಮಾಪಕರು ಕೂಡ ಇದ್ದರು. ವಿಭಿನ್ನವಾಗಿ ಪ್ರೋಮೋ ತೋರಿಸಬೇಕು ಎಂದು ‘ಕಾಂತಾರ’ (Kantara) ಕೋಣವನ್ನೇ ಬಳಸಿಕೊಂಡಿದ್ದೇವೆ. Royal Challengers Banglore ಈಗ Royal Challengers Bengaluru ಆಗಿದೆ. ಮುಂಚೆಯಿಂದಲೂ ಆರ್‌ಸಿಬಿ ಫ್ಯಾನ್ ಆಗಿದ್ದೆ ಈಗ ಇದರ ಪ್ರಚಾರ ಭಾಗವಾಗಿರೋದರ ಬಗ್ಗೆ ಖುಷಿಯಿದೆ ಎಂದು ಮಾತನಾಡಿದ್ದರು.
ಕ್ರಿಸ್ ಗೇಲ್ ಮತ್ತು ಅನುಷ್ಕಾ ಶಮಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ (ಮೇ 18) ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ, ಕ್ರಿಸ್ ಗೇಲ್ ಅವರ ಅಭಿಮಾನಿ ನಾನು ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದು ರಿಷಬ್ ಮಾತನಾಡಿದ್ದಾರೆ.