ದೇಶಾದ್ಯಂತ ಕಾಂತಾರ (Kantara) ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು (Win) ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ (Rishabh Shetty) ದೈವಕ್ಕೆ (Daiva) ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.
Advertisement
ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ‘ಕಾಂತಾರ’ ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.
Advertisement
Advertisement
ಈವರೆಗೆ ಹೊಂಬಾಳೆ ಬ್ಯಾನರ್ (Hombale Films) ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಹೊಂಬಾಳೆ ಫಿಲಮ್ಸ್ ಸಂಸ್ಥೆ ನಿರ್ಮಿಸಿ 2017 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದ ಚಿತ್ರ ‘ ರಾಜಕುಮಾರ’ ಸೂಪರ್ ಹಿಟ್ ಚಿತ್ರವಾಗಿತ್ತು. ಕನ್ನಡಿಗರ ಮನಸೂರೆಗೊಂಡಿರುವ ಈ ಚಲನಚಿತ್ರವನ್ನು 65 ಲಕ್ಷ ಜನರು ವೀಕ್ಷಿಸಿ ದಾಖಲೆ ನಿರ್ಮಾಣವಾಗಿತ್ತು.
Advertisement
2018 ರಲ್ಲಿ ಹೊಂಬಾಳೆ ನಿರ್ಮಿಸಿದ ಮತ್ತೊಂದು ಸೂಪರ್ ಹಿಟ್ ಚಿತ್ರ ಕೆಜಿಎಫ್ 1 ಬಿಡುಗಡೆಯಾಯಿತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ದೇಶದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಈ ಚಿತ್ರವನ್ನು ಈವರೆಗೆ ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿ ಮತ್ತೊಂದು ದಾಖಲೆ ನಿರ್ಮಿಸಿತ್ತು.. ಆ ಮೂಲಕ ಹೊಂಬಾಳೆ ಬ್ಯಾನರ್ ನ ಹಿಂದಿನ ದಾಖಲೆಯನ್ನು ‘ಕೆಜಿಎಫ್ 1 ‘ ಬ್ರೇಕ್ ಮಾಡಿತ್ತು. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಹೊಂಬಾಳೆ ಸಂಸ್ಥೆ ನಿರ್ಮಿಸಿ 2022 ರಲ್ಲಿ ಬಿಡುಗಡೆಯಾದ ಮಗದೊಂದು ಚಿತ್ರ ‘ಕೆಜಿಎಫ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಯಶ್ ಅಭಿನಯದ ಈ ಚಿತ್ರ ಬಾಲಿಹುಡ್ ನ ಎಲ್ಲ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿತ್ತು.. ದೇಶದ ಚಿತ್ರರಂಗವೇ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು.. ಕರ್ನಾಟಕದ 72 ಲಕ್ಷ ಸಿನಿಮಾಪ್ರಿಯರು ಇದುವರೆಗೆ ಈ ಚಿತ್ರ ವೀಕ್ಷಿಸಿದ್ದೂ ಕೂಡ ದಾಖಲೆಯಾಗಿ ಉಳಿದಿದೆ.
ಹೊಂಬಾಳೆ ಬ್ಯಾನರ್ ನ ಚಿತ್ರಗಳು ಸ್ಥಾಪಿಸಿದ ದಾಖಲೆಗಳನ್ನು ಅವರದೇ ಸಂಸ್ಥೆಯ ನಿರ್ಮಾಣದ ಚಿತ್ರಗಳು ಮುರಿಯುತ್ತಾ ನೂತನ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸುತ್ತಾ ಬಂದಿದೆ. ಇದೀಗ ಕಾಂತಾರ ಚಲನಚಿತ್ರ ಆ ಸಾಲಿಗೆ ಸೇರುವ ಮೂಲಕ ಹೊಂಬಾಳೆ ಸಂಸ್ಥೆಗೆ ಗರಿಮೆ ಮೂಡಿಸಿದೆ.. ಹೊಂಬಾಳೆ ನಿರ್ಮಾಣದ ಎಲ್ಲ ಚಲನಚಿತ್ರಗಳ ಇದುವರೆಗಿನ ಎಲ್ಲಾ ಹಿಂದಿನ ದಾಖಲೆಗಳನ್ನು ಇಪ್ಪತ್ತೈದು ದಿನಗಳಲ್ಲಿಯೇ ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ ‘ಕಾಂತಾರ’ ಎನ್ನುವುದು ಹೆಮ್ಮೆಯ ವಿಷಯ. ಮುಂದಿನ ವಾರಗಳಲ್ಲಿ ಒಂದು ಕೋಟಿ ಸಿನಿಮಾಪ್ರಿಯರು ವೀಕ್ಷಿಸಿ ಮಗದೊಂದು ದಾಖಲೆ ನಿರ್ಮಿಸುವ ಕಡೆಗೆ ‘ಕಾಂತಾರ’ ಸಾಗುತ್ತಿದೆ.