ಹೊಸಬರ ‘ಅಟ್ಲಿ’ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್: ಅಕ್ಟೋಬರ್ 27ರಿಂದ ಆರಂಭ

Public TV
1 Min Read
FotoJet 2 65

ನ್ನಡ ಚಿತ್ರರಂಗದಲ್ಲಿ ಈಗ ಸಂಭ್ರಮದ ವಾತಾವರಣ. ಒಂದುಕಡೆ ಹಲವು ಚಿತ್ರಗಳು ಯಶಸ್ವಿಯಾಗಿ ಜನಮನಸೂರೆಗೊಳ್ಳುತ್ತಿದೆ. ಮತ್ತೊಂದು ಕಡೆ ಅಷ್ಟೇ ಸಂಖ್ಯೆಯ ಚಿತ್ರಗಳು ಪ್ರಾರಂಭವಾಗುತ್ತಿದೆ.ಆರ್ ಜಿ ವಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಂಗನಾಥ್ ಆರ್ ನಿರ್ದೇಶನದ “ಅಟ್ಲಿ” (Atlee) ಚಿತ್ರದ ಚಿತ್ರೀಕರಣ ಇದೇ 27ರಿಂದ ಆರಂಭವಾಗುತ್ತಿದೆ. ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ಮೂರುದಿನಗಳ ಚಿತ್ರೀಕರಣ ನಡೆಯಲಿದೆ. ಇತ್ತೀಚಿಗೆ ನಿರ್ಮಾಣ ಸಂಸ್ಥೆಯ ಲಾಂಛನವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀಗಳು ಅನಾವರಣಗೊಳಿಸಿದರು. ಚಿತ್ರದ ಶೀರ್ಷಿಕೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಬಿಡುಗಡೆ ಮಾಡಿದರು.

FotoJet 1 76

“ಅಟ್ಲಿ” ಕಾಸರಗೋಡಿನಲ್ಲಿ ನಡೆಯುವ ಕಥೆ. ನಿರ್ದೇಶಕ ರಂಗನಾಥ್ (Ranganath) ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ “ಅರಿವು”, “ಪ್ರಭುತ್ವ” ಚಿತ್ರಗಳನ್ನು ನಿರ್ದೇಶಿಸಿದ್ದ ರಂಗನಾಥ್ ಅವರಿಗೆ ಇದು ಮೂರನೇ ಚಿತ್ರ. ಲವ್, ಕ್ರಾಂತಿ ಪೊಲಿಟಿಕಲ್ ಡ್ರಾಮಾ  ಎಲ್ಲಾ ಅಂಶಗಳಿರುವ ಮಾಸ್ ಚಿತ್ರ “ಅಟ್ಲಿ” ಈ ಚಿತ್ರಕ್ಕೆ ಅರವತ್ತು ದಿನಗಳ ಚಿತ್ರೀಕರಣ ಮೂರು ಹಂತಗಳಲ್ಲಿ ನಡೆಯಲಿದೆ.‌ ಪೂಜಾ ಜನಾರ್ದನ್ (Pooja Janardhan)  ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆ.ಜಿ.ಎಫ್ ಅನ್ ಮೋಲ್,  ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ,ಲಲಿತಾ  ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್

FotoJet 96

ಚಿತ್ರದ ಮೂರು ಹಾಡುಗಳನ್ನು ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ..

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *