ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿರುವ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಬ್ ಪಂತ್ ಆನ್ ಫೀಲ್ಡ್ ನಲ್ಲೇ ಕಿಪ್ ಅಪ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
2ನೇ ಟೆಸ್ಟ್ ಪಂದ್ಯದ ವೇಳೆ ರಿಷಬ್ ಪಂತ್ ಡ್ರಿಂಕ್ಸ್ ಬ್ರೇಕ್ ವೇಳೆ ವಿಶ್ರಾಂತಿಗಾಗಿ ಮೈದಾನದಲ್ಲೇ ಕೆಲ ಕ್ಷಣಗಳ ಕಾಲ ಮಲಗಿದ್ದರು. ಈ ವೇಳೆ ಏಕಾಏಕಿ ಕಿಪ್ ಅಪ್ ಮಾಡಿ ಎದ್ದು ನಿಂತಿದ್ದಾರೆ. ಈ ರೀತಿ ಕಿಪ್ ಅಪ್ ಮಾಡಬೇಕಾದರೆ ಅತ್ಯುತ್ತಮವಾದ ದೈಹಿಕ ಸಾಮರ್ಥ್ಯ ಹೊಂದಿದರೆ ಮಾತ್ರ ಸಾಧ್ಯವಾಗುತ್ತದೆ.
Advertisement
Not bad!#AUSvIND pic.twitter.com/QuyrfFcfpD
— cricket.com.au (@cricketcomau) January 4, 2019
Advertisement
ಪಂದ್ಯದ ಬಳಿಕ ಮಾತನಾಡಿದ ಪಂತ್, ನಾನು 90 ರನ್ ಗಳಿಸಿದ ವೇಳೆ ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ 92, 92 ರನ್ ಗಳಿಗೆ ಔಟಾಗಿದ್ದೆ. ಆದರೆ ಇಂದಿನ ಶತಕ ನನಗೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ. ಶತಕ ಸಂಭ್ರಮದ ವೇಳೆ ಆ ಕ್ಷಣದಲ್ಲಿ ಏನು ತೋಚಿದೆಯೋ ಅದನ್ನು ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನು ಓದಿ: 15 ವರ್ಷಗಳ ಹಿಂದಿನ `ದಿ ವಾಲ್’ ದ್ರಾವಿಡ್ ದಾಖಲೆ ಮುರಿದ ಪೂಜಾರ
Advertisement
21 ವರ್ಷದ ರಿಷಬ್ ಪಂತ್ ಅಜೇಯ 159 ರನ್ (189 ಎಸೆತ, 15 ಎಸೆತ, 1 ಸಿಕ್ಸರ್) ಸಿಡಿಸಿದ್ದು, ಈ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನೆಲದಲ್ಲಿ ಭಾರತದ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಲ್ಲದೇ ಆಸೀಸ್ ನೆಲದಲ್ಲಿ ಪ್ರವಾಸಿ ವಿಕೆಟ್ ಕೀಪರ್ ಸಿಡಿಸಿದ 2ನೇ ಅಧಿಕ ಮೊತ್ತವಾಗಿದೆ. 2012ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 169 ರನ್ ಸಿಡಿಸಿದ್ದರು.
Advertisement
A moment to remember for Rishabh Pant!#AUSvIND | @Domaincomau pic.twitter.com/J8uK3gQPJh
— cricket.com.au (@cricketcomau) January 4, 2019
An unconventional shot of the day from Rishabh Pant!#AUSvIND | @MastercardAU pic.twitter.com/HOqsjHtgKI
— cricket.com.au (@cricketcomau) January 4, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv