ಬ್ರಿಸ್ಪೇನ್: ಟಿ20 ವಿಶ್ವಕಪ್‍ಗಾಗಿ (T20 World Cup) ಆಸ್ಟ್ರೇಲಿಯಾದಲ್ಲಿರುವ (Australia) ಭಾರತ (India) ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ (Rishabh Pant) ಗಾಯಗೊಂಡಿರುವ ಕುರಿತು ಗುಮಾನಿ ಎದ್ದಿದೆ.
Advertisement
ಪಂತ್ ಡಗೌಟ್‍ನಲ್ಲಿ ಮಂಡಿಗೆ ಐಸ್ ಕ್ಯೂಬ್ ಕಟ್ಟಿಕೊಂಡು ಕುಳಿತಿರುವ ಫೋಟೋಗಳು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಕಂಡು ಬಂತು. ಆ ಬಳಿಕ ಇದೀಗ ಪಂತ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್, ಶಮಿ ಮಾರಕ ಬೌಲಿಂಗ್ – ಭಾರತಕ್ಕೆ 6 ರನ್‌ಗಳ ರೋಚಕ ಜಯ
Advertisement
Advertisement
ಪಂತ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಭಾರತ ಅ.23 ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಈ ಪಂದ್ಯದಿಂದಲೂ ಪಂತ್ ಹೊರಗುಳಿಯುವ ಸಾಧ್ಯತೆ ಇದೆ. ಪಂತ್ ಗಾಯದ ಕುರಿತಾಗಿ ಬಿಸಿಸಿಐ (BCCI) ಹೆಚ್ಚಿನ ಮಾಹಿತಿ ನೀಡಬೇಕಾಗಿದೆ. ಇದನ್ನೂ ಓದಿ: ಕೊರೊನಾ ಇದ್ದರೂ T20 ವಿಶ್ವಕಪ್ ಆಡಲು ಆಟಗಾರರಿಗೆ ಅವಕಾಶ!
Advertisement
Looks like #RishabhPant hurt his leg in the practice.
Hope it is not serious ???? pic.twitter.com/onXS7JsKoB
— Virat Dangar (@viratdangar) October 17, 2022
ಇತ್ತ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್‍ಗಳ ರೋಚಕ ಜಯ ಸಾಧಿಸಿದೆ. ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ 6 ರನ್‍ಗಳ ರೋಚಕ ಜಯ ಸಾಧಿಸಿತು. ಗೆಲ್ಲಲು 187 ರನ್‍ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ಡೇವಿಡ್ ರನೌಟ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಕ್ಯಾಚನ್ನು ಕೊಹ್ಲಿ ಪಡೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟರು. 9 ರನ್‍ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ಪಂದ್ಯವನ್ನು ಗೆದ್ದುಕೊಂಡು ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮಿಂಚಿದೆ.
Live Tv
[brid partner=56869869 player=32851 video=960834 autoplay=true]