ಅಡಿಲೇಡ್: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ವಿರುದ್ಧ ಆಸೀಸ್ ಆಟಗಾರ ಪ್ಯಾಟ್ ಕಮಿನ್ಸ್ ಸ್ಲೆಡ್ಜಿಂಗ್ ಮಾಡಿ ಆಟದ ಮೇಲಿನ ಗಮನ ಬೇರೆಡೆ ಸೆಳೆಯಲು ಯತ್ನಿಸಿದ ಘಟನೆ ಮೊದಲ ಟೆಸ್ಟ್ ಪಂದ್ಯದ ವೇಳೆ ನಡೆದಿದೆ.
ಟೆಸ್ಟ್ ಪಂದ್ಯದ ಮೊದಲ ದಿನದಾಟದ 2ನೇ ಸೆಷನ್ ವೇಳೆ ಘಟನೆ ನಡೆದಿದ್ದು, ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ರಿಷಬ್ ಬ್ಯಾಟಿಂಗ್ ನಡೆಸುತ್ತಿದ್ದರು. ಆದರೆ ಈ ವೇಳೆ ಪಂತ್ ಬಳಿ ಬಂದ ಪ್ಯಾಟ್ ಮಾತನಾಡಲು ಯತ್ನಿಸಿ ಸ್ಲೆಡ್ಜಿಂಗ್ ಮಾಡಿದ್ದಾರೆ. ಆದರೆ ಪ್ಯಾಟ್ ಮಾತಿಗೆ ತಲೆ ಕೆಡಿಸಿಕೊಳ್ಳದ ಪಂತ್ ಬೌಲರ್ ಮಾತನ್ನು ನಿರ್ಲಕ್ಷ್ಯ ಮಾಡಿ ಮುಂದೇ ಸಾಗಿದ್ದಾರೆ.
Advertisement
Nathan Lyon gets his second wicket. Rishabh Pant departs scoring 25. #TeamIndia now 127/6 #AUSvIND pic.twitter.com/h7qX24b77k
— BCCI (@BCCI) December 6, 2018
Advertisement
ಸಾಮಾಜಿಕ ಜಾಲತಾಣದಲ್ಲಿ ಆಸೀಸ್ ಬೌಲರ್ ನ ಈ ಕೃತ್ಯದ ವಿಡಿಯೋ ವೈರಲ್ ಆಗಿದೆ. ಆಸೀಸ್ ಪ್ರವಾಸ ಕೈಗೊಳ್ಳುವ ಯಾವುದೇ ತಂಡ ಯುವ ಆಟಗಾರರ ಮೇಲೆ ಸಾಮಾನ್ಯವಾಗಿ ಕಾಂಗರೂ ಬಳಗ ಸ್ಲೆಡ್ಜಿಂಗನ್ನು ಅಸ್ತ್ರವಾಗಿ ಪ್ರಯೋಗಿಸುತ್ತದೆ. ಇದರ ಹಿಂದಿನ ಉದ್ದೇಶ ಯುವ ಆಟಗಾರರ ಗಮನವನ್ನು ಆಟದಿಂದ ಬೇರೆಡೆ ಸೆಳೆದು ಅವರನ್ನು ಬಹುಬೇಗ ಔಟ್ ಮಾಡುವುದಾಗಿದೆ. ಆದರೆ ಪಂದ್ಯದಲ್ಲಿ ಇದಕ್ಕೆ ಅವಕಾಶ ನೀಡದ ಪಂತ್ ಮುಗುಳ್ನಗುತ್ತ ಮುಂದೇ ಸಾಗಿದ್ದಾರೆ.
Advertisement
ಪಂತ್ ಎಂದಿನಂತೆ ತಮ್ಮ ಆಸೀಸ್ ವಿರುದ್ಧ ಪಂದ್ಯದಲ್ಲೂ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರೆಸಿದ್ದರು. ಪಂದ್ಯದಲ್ಲಿ 38 ಎಸೆತಗಳಲ್ಲಿ 25 ರನ್ ಗಳಿಸಿದ ಪಂತ್ ನ್ಯಾಥನ್ ಲಯನ್ ಬೌಲಿಂಗ್ ನಲ್ಲಿ ಔಟಾಗುವ ಮೂಲಕ ಪೆವಿಲಿಯನ್ ಸೇರಿದರು. ಆದರೆ ಇದಕ್ಕೂ ಮುನ್ನ ಚೇತೇಶ್ವರ ಪೂಜಾರಗೆ ಉತ್ತಮ ಸಾಥ್ ನೀಡಿದ ಪಂತ್ ನೀಡಿ 6ನೇ ವಿಕೆಟ್ ಗೆ 41 ರನ್ ಕಾಣಿಕೆ ನೀಡಿದರು. ಇದನ್ನು ಓದಿ : ಗಲ್ಲಿಯಲ್ಲಿ ಉಸ್ಮಾನ್ ಖವಾಜ ಅತ್ಯುತ್ತಮ ಕ್ಯಾಚ್ – ಕೊಹ್ಲಿ ಔಟಾಗುತ್ತಿರೋ ವಿಡಿಯೋ ನೋಡಿ
Advertisement
ಪಂದ್ಯದಲ್ಲಿ ಆಕರ್ಷಕ 123 ರನ್ (246 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪೂಜಾರ ಟೆಸ್ಟ್ ಕ್ರಿಕೆಟ್‍ನಲ್ಲಿ 16ನೇ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 5 ಸಾವಿರ ರನ್ ಗಡಿದಾಟಿದರು. ಪೂಜಾರ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 87.5 ಓವರ್ ಗಳಲ್ಲಿ 9 ವಿಕೆಟ್ ನಕಷ್ಟಕ್ಕೆ 250 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
https://twitter.com/premchoprafan/status/1070535549113397248?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv