– ಆಯ್ಕೆಯ ರೇಸ್‍ನಲ್ಲಿ ರಹಾನೆ, ವಿಜಯ್ ಶಂಕರ್: ಎಂಎಸ್‍ಕೆ ಪ್ರಸಾದ್
ಮುಂಬೈ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಮುಂದಿನ ವಿಶ್ವಕಪ್ ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ ಆಗಿದೆ ಎನ್ನಲಾಗಿದೆ.
ಈ ಕುರಿತು ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಮಾಹಿತಿ ನೀಡಿದ್ದು, ವಿಶ್ವಕಪ್ ತಂಡದ ಆಯ್ಕೆ ವೇಳೆ ರಿಷಬ್ ಪಂತ್‍ರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ರಿಷಬ್ ಪಂತ್ ಆಯ್ಕೆ ಆರೋಗ್ಯಕರ ತಲೆನೋವಾಗಿದೆ ಎಂದು ತಿಳಿಸಿದ್ದಾರೆ.
ರಿಷಬ್ ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕ ಅವರ ಬ್ಯಾಟಿಂಗ್‍ನಲ್ಲಿ ಉತ್ತಮ ಸುಧಾರಣೆ ಆಗಿದೆ. ಮತ್ತಷ್ಟು ಪರಿಪಕ್ವತೆ ಸಾಧಿಸಲು ಟೀಂ ಇಂಡಿಯಾ ಎ ತಂಡ ಸೇರುವಂತೆ ಸಾಕಷ್ಟು ಅವಕಾಶಗಳನ್ನು ಅವರಿಗೆ ನೀಡಿದ್ದೇವೆ. ಮೊದಲು ರಿಷಬ್‍ರನ್ನು ದಪ್ಪ ಚರ್ಮದ ವ್ಯಕ್ತಿ ಎಂದು ತಿಳಿದಿದ್ದೇವು. ಆದರೆ ಇಂದು ಆತ ಅನುಭವಿ ಆಟಗಾರರಂತಾಗಿದ್ದು, ತಂಡಕ್ಕೆ ಸಾಕಷ್ಟು ಬದ್ಧತೆಯನ್ನು ತೋರಿದ್ದಾರೆ ಎಂದರು.
ಇದೇ ವೇಳೆ ರಹಾನೆ ಹಾಗೂ ವಿಜಯ್ ಶಂಕರ್ ಅವರನ್ನು ಆಯ್ಕೆ ವೇಳೆ ಪರಿಗಣಿಸಲಾಗುತ್ತದೆ. ಏಕೆಂದರೆ ಅವರು ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ಕಳೆದ 11 ಇನ್ನಿಂಗ್ಸ್ ಗಳಲ್ಲಿ ರಹಾನೆ 74.62 ಸರಾಸರಿಯಲ್ಲಿ 597 ರನ್ ಗಳಿಸಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಆಯ್ಕೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ.
2019 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲು ಏಪ್ರಿಲ್ 23 ಅಂತಿಮ ದಿನಾಂಕವಾಗಿದೆ. ಜೂನ್ 05 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾರನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿಯನ್ನು ಆರಂಭಿಸಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv