ತಿರುಪತಿ: ಟೀಂ ಇಂಡಿಯಾ (Team India) ಆಟಗಾರ ರಿಷಬ್ ಪಂತ್ (Rishabh Pant) ಮತ್ತು ಅಕ್ಷರ್ ಪಟೇಲ್ (Axar Patel) ಇಂದು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ (Tirupati Balaji Temple) ಆಶೀರ್ವಾದ ಪಡೆದಿದ್ದಾರೆ.
ಈ ಬಗ್ಗೆ ರಿಷಬ್, ದೇವಾಲಯದ ಶಕ್ತಿಯನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ದೇವಸ್ಥಾನದಿಂದ ಹೊರಬರಲು ಮನಸ್ಸಾಗಲಿಲ್ಲ. ನಂಬಲಾಗದ ಧನಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿ ಅಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್ ಬಾಲ್ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ಟೀಕೆ
Advertisement
Not enough words to describe the energy of the place. Didn’t feel like leaving the temple. Unbelievable positive energy & spiritual energy. ???? ???? pic.twitter.com/UAroS4QzfX
— Rishabh Pant (@RishabhPant17) November 3, 2023
Advertisement
ರಿಷಬ್ ಪಂತ್ ಕಳೆದ 2022ರಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವು ತಿಂಗಳುಗಳಿಂದ ಕ್ರಿಕೆಟ್‍ನಿಂದ ದೂರ ಉಳಿದಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಕ್ರಿಕೆಟ್‍ಗೆ ಮರಳುವ ನಿರೀಕ್ಷೆ ಇದೆ.
Advertisement
ವಿಶ್ವಕಪ್‍ಗೆ ಆಯ್ಕೆಯಾಗಿದ್ದ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯಿಂದ ಕೊನೆಯ ಕ್ಷಣದಲ್ಲಿ ಪಂದ್ಯಗಳಿಂದ ವಂಚಿತರಾದರು. ಅಕ್ಷರ್ ಅವರ ಸ್ಥಾನಕ್ಕೆ ಆರ್ ಅಶ್ವಿನ್ ಆಯ್ಕೆಯಾದರು. ಪ್ರಸ್ತುತ ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಅಕ್ಷರ್ ಪಟೇಲ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಇನ್ನಿಂಗ್ಸ್‌ಗಳಿಂದ 50 ವಿಕೆಟ್ ಪಡೆದಿದ್ದಾರೆ. 54 ಏಕದಿನ ಪಂದ್ಯಗಳನ್ನು ಆಡಿ 59 ವಿಕೆಟ್ ಗಳಿಸಿದ್ದಾರೆ. 45 ಟಿ20 ಪಂದ್ಯಗಳಿಂದ 39 ವಿಕೆಟ್ ಉರುಳಿಸಿದ್ದಾರೆ.
ರಿಷಬ್ ಪಂತ್ ಟೀಂ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳಿಂದ 2,271 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳು ಹಾಗೂ 5 ಶತಕಗಳು ಸೇರಿವೆ. 30 ಏಕದಿನ ಪಂದ್ಯಗಳಿಂದ 865 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧ ಶತಕಗಳು ಸೇರಿವೆ. 66 ಟಿ20 ಪಂದ್ಯಗಳಿಂದ 987 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳಿವೆ. ಇದನ್ನೂ ಓದಿ: World Cup 2023: ಶ್ರೇಯಸ್ ಅಯ್ಯರ್‌ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಕ್ರಿಕೆಟ್ ದೇವರು
Web Stories