ಬೆಂಗಳೂರು: ಕೊರೊನಾ ವೈರಸ್ ಪರಿಣಾಮ ಬಹುತೇಕ ಮಂದಿ ‘ವರ್ಕ್ ಫ್ರಂ ಹೋಂ’ ಮೊರೆ ಹೋಗಿದ್ದಾರೆ. ಹೀಗಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲೂ ಕೂಡ ‘ವರ್ಕ್ ಫ್ರಂ ಹೋಂ’ ಬಲು ಜೋರಾಗಿದ್ದು, ಮಗನೊಂದಿಗೆ ಸಮಯ ಕಳೆಯೋದ್ರಲ್ಲಿ ಶೆಟ್ರು ಫುಲ್ ಬ್ಯುಸಿಯಾಗಿದ್ದಾರೆ.

ಹೌದು. ಹೆಚ್ಚಾಗಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದ ರಿಷಬ್ ಅವರಿಗೆ ಸದ್ಯ ಕೊರೊನಾ ಎಫೆಕ್ಟ್ ನಿಂದ ಕೊಂಚ ಬ್ರೇಕ್ ಸಿಕ್ಕಿದೆ. ಆದ್ದರಿಂದ ತಮ್ಮ ಹುಟ್ಟೂರಿನಲ್ಲಿ ಕುಟುಂಬದ ಜೊತೆ ರಿಷಬ್ ಖುಷಿಯಿಂದ ಸಮಯ ಕಳೆಯುತ್ತಿದ್ದು, ತಮ್ಮ ಮಗ ರಣ್ವಿತ್‍ಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ರಿಷಬ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
https://twitter.com/shetty_rishab/status/1240672139495108613
‘ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ’ ಎಂದು ಬರೆದು ಮಗನಿಗೆ ಎಣ್ಣೆ ಹಚ್ಚುತ್ತಿರುವ ಫೋಟೋವನ್ನು ರಿಷಬ್ ಟ್ವೀಟ್ ಮಾಡಿದ್ದಾರೆ.
https://twitter.com/rakshitshetty/status/1240653722989899776
ಈ ಟ್ವೀಟ್ ನೋಡಿದ ನೆಟ್ಟಿಗರು ಅಪ್ಪ, ಮಗನ ಕ್ಯೂಟ್ ಫೋಟೋಗೆ ಫಿದಾ ಆಗಿದ್ದಾರೆ. ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಕಮೆಂಟ್‍ನಲ್ಲೇ ಅಪ್ಪ, ಮಗನ ಕ್ಯೂಟ್ ಫೋಟೋ ಬಗ್ಗೆ ಕವನ ಬರೆದಿದ್ದಾರೆ. ಇತ್ತ ಗೆಳೆಯನ ಟ್ವೀಟ್ ನೋಡಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಂದು ಕವನ ಬರೆದು ಟ್ವೀಟ್ ಮಾಡಿದ್ದಾರೆ.
😍😍 ಇದರಲ್ಲಿ ಸಿಗೋ ಖುಷಿನೇ ಬೇರೆ
ಮಗ ದೊಡ್ಡವನಾದಗ ನಿಮ್ಮ ಮೇಲೆ ಮಾನ ನಷ್ಟ ಕೇಸ್ ಹಾಕದೆ ಇದ್ದರೆ ಸಾಕು 🤣
— Indresh🦁#SimbaRajya (@narayaindi) March 19, 2020
‘ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ’ ಎಂದು ಕವನ ಹೆಣೆದು ರಿಷಬ್ ಹಾಗೂ ರಣ್ವಿತ್‍ನ ಮುದ್ದಾದ ಫೋಟೋವನ್ನು ರಕ್ಷಿತ್ ವರ್ಣಿಸಿದ್ದಾರೆ.
ಕರೊನಾ ತಂದ ಸೌಭಾಗ್ಯ ಈಗ..
ರಿಶಬ್ ಅಣ್ಣನ ಪುತ್ರಮಜ್ಜನ ಯಾಗ..
work from home ಲೋಕಕಲ್ಯಾಣ..
Go back 2 home ನೆಮ್ಮದಿಯ ತಾಣ..
— ವಿಕಟಕವಿ (@MadhyasthaR) March 19, 2020
ರಿಷಬ್, ರಣ್ವಿತ್ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಮಗನಿಗೆ ಸ್ನಾನ ಮಾಡಿಸೋದ್ರಲ್ಲಿ ತಂದೆಗೆ ಸಿಗೋ ಖುಷಿನೇ ಬೇರೆ, ಮಗ ದೊಡ್ಡವನಾದ ಮೇಲೆ ನಿಮ್ಮ ಮೇಲೆ ಮಾನನಷ್ಟ ಕೇಸ್ ಹಾಕದಿದ್ದರೆ ಸಾಕು ಎಂದು ನೆಟ್ಟಿಗರೊಬ್ಬರು ರಿಷಬ್ ಕಾಲೆಳೆದಿದ್ದಾರೆ. ಇನ್ನೊಬ್ಬರು ಕಮೆಂಟ್‍ನಲ್ಲಿ, ಕೊರೊನಾ ತಂದ ಸೌಭಾಗ್ಯ ಈಗ. ರಿಷಬ್ ಅಣ್ಣನ ಪುತ್ರಮಜ್ಜನ ಯಾಗ. ವಕ್ ಫ್ರಂ ಹೋಮ್ ಲೋಕ ಕಲ್ಯಾಣಕ್ಕೆ. ಗೋ ಬ್ಯಾಕ್ ಟು ಹೋಮ್ ನೆಮ್ಮದಿಯ ತಾಣಕ್ಕೆ ಎಂದು ಕವನ ಬರೆದಿದ್ದಾರೆ. ಮತ್ತೊಬ್ಬರು ಕಮೆಂಟ್‍ನಲ್ಲಿ ಶೆಟ್ರೆ ನೀವು ನಿಜವಾದ ಸುಖ ಅನುಭವಿಸುತ್ತಿದ್ದೀರಿ, ಈ ಅವಕಾಶ ಕಲ್ಪಿಸಿಕೊಟ್ಟ ಕೊರೊನಾಗೆ ಥ್ಯಾಂಕ್ಸ್ ಹೇಳಿ ಎಂದಿದ್ದಾರೆ.
ಶೆಟ್ರು…ನಿಜವಾದ ಜೀವನ ಸುಖ ಅನುಭವಿಸುತ್ತಾ ಇದ್ದೀರಿ ಖುಷಿಪಡಿ… ಥಾಂಕ್ಸ್ ಹೇಳಿ ಕೋರೋ ನ ಗೆ ಈ ಅವಕಾಶ ಕಲ್ಪಿಸಿಕೊಟ್ಟಿದೆ
— Lanki.G (@LankiG1) March 19, 2020
ಒಟ್ಟಾರೆ ಕೊರೊನಾ ಭೀತಿಗೆ ಬ್ಯುಸಿ ಶೂಟಿಂಗ್ ಕೆಲಸದಿಂದ ರೆಸ್ಟ್ ಪಡೆದಿರುವ ರಿಷಬ್ ಮಾತ್ರ ಮನೆಯಲ್ಲಿ ಕುಟುಂಬದ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಪ್ಪ, ಮಗನ ಈ ಕ್ಯೂಟ್ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

